
ಸುಳ್ಯ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ನಿವಾಸಿ ಟಿ ಎ ಜುಬೈರ್ ತೆಕ್ಕಿಲ್ ಅಲ್ಪಕಾಲದ ಆನಾರೋಗ್ಯದಿಂದ ಅಜ್ಮೀರ್ನಲ್ಲಿ ನಿಧನ ಹೊಂದಿದರು ಕುಟುಂಬ ಸಮೇತ ಕಳೆದ ಕೆಲವು ತಿಂಗಳು ಅಜ್ಮೀರ್ನಲ್ಲಿ ವಾಸವಾಗಿ ವ್ಯಾಪಾರ ನಡೆಸುತ್ತಿದ್ದರು ಜೂನ್ 5 ರಂದು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು ಅವರಿಗೆ 58 ವರ್ಷ ವಯಸಾಗಿದ್ದು ಪತ್ನಿ ಉಮೈಮ ಮೈಲ್ಕಲ್ ಗೂನಡ್ಕ ಪುತ್ರ ನಾಫಿದ್ ತೆಕ್ಕಿಲ್ ಪುತ್ರಿ ನಜಾ ಫಾತಿಮಾ ತೆಕ್ಕಿಲ್ ಸಹೋದರ ಸಹೋದರಿ ಮತ್ತು ಅಪಾರ ಕುಟುಂಬ ವರ್ಗವನ್ನು ಬಿಟ್ಟಗಲಿದ್ದಾರೆ ಮೃತರ ಅಂತ್ಯ ಸಂಸ್ಕಾರ ಪೇರಡ್ಕ ಗೂನಡ್ಕ ಮೊಹಿಯದ್ದಿನ್ ಜುಮ ಮಸ್ಜಿದ್ ನಲ್ಲಿ ಆದಿತ್ಯವಾರ ನಡೆಯಲಿದೆ.








