ಸುಳ್ಯ ತಾಲ್ಲೂಕು, ಬೆಟ್ಟಂಪಾಡಿ ಗ್ರಾಮದ ಸಾವಿತ್ರಿ ಎಂಬುವವರು ಮಾರಕ ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಕಿಡ್ನಿಯವರೆಗೆ ಹರಡಿರುವುದರಿಂದ ತಕ್ಷಣ ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿದೆ. ಶಸ್ತ್ರಚಿಕಿತ್ಸೆಯ ನಂತರವೂ ಕೂಡಾ ನಿಯಮಿತ ಡಯಾಲಿಸಿಸ್ ಚಿಕಿತ್ಸೆ ಪಡೆಯಬೇಕಿದೆ. ಬಡ ಕುಟುಂಬದ ಇವರು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯವರು ಶಸ್ತ್ರಚಿಕಿತ್ಸೆ ಪ್ರಾರಂಭಿಸಲು ಮೊದಲು ವೆಚ್ಚ ಪಾವತಿಸಬೇಕು ಎಂದು ತಿಳಿಸಿದ್ದಾರೆ. ಜೀವ ಉಳಿಸಲು ಅಗತ್ಯವಾದ ಹಣವನ್ನು ಕುಟುಂಬವು ಒದಗಿಸಲು ಅಸಮರ್ಥವಾಗಿದೆ. ಮಾನವೀಯ ಹಿತದೃಷ್ಟಿಯಿಂದ, ದಯವಿಟ್ಟು ನಿಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ. ನಿಮ್ಮ ನೆರವಿನಿಂದ ಸಾವಿತ್ರಿ ಅವರು ಬದುಕಿನ ಹೊಸ ಆಶೆಯನ್ನು ಕಾಣಬಹುದು.
