
ಹೆಣ್ಣು ಮಗಳು ಶಿಕ್ಷಣ ಪಡೆದರೆ ಕುಟುಂಬ ಮಾತ್ರವಲ್ಲ, ಸಮಾಜವೂ ಪ್ರಗತಿ ಸಾಧಿಸುತ್ತದೆ. ಶಿಕ್ಷಣವು ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಉತ್ತಮ ಭವಿಷ್ಯವನ್ನು ನೀಡುತ್ತದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಪ್ರಗತಿಯ ಮೊದಲ ಹೆಜ್ಜೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರೂ ಎನ್ನೆಂಸಿಯ ಕನ್ನಡ ವಿಭಾಗದ ಮುಖ್ಯಸ್ಥರು ಆದ ಡಾ. ಅನುರಾಧಾ ಕುರುಂಜಿಯವರು ಅಭಿಪ್ರಾಯಪಟ್ಟರು. ಅವರು ಮಹಿಳಾ ದಿನಾಚರಣೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಯನಗರ ಕಾರ್ಯಕ್ಷೇತ್ರದ ಬಾಂಧವ್ಯ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕಾನೂನು” ವಿಷಯದ ಕುರಿತು ಮಾಹಿತಿ ನೀಡುತ್ತಾ ಮಾತನಾಡುತ್ತಿದ್ದರು. ಸಂಯೋಜಕಿ ಅನುರಾಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕರಾದ ದಿನೇಶ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಲಕ್ಷ್ಮೀ, VLA ಶೃಂಗ, ಒಕ್ಕೂಟದ ಅಧ್ಯಕ್ಷೆ ನಾಗವೇಣಿ, ಸೇವಾ ಪ್ರತಿನಿಧಿ ಸುರೇಶ್ , ಜ್ಞಾನ ವಿಕಾಸ ಕೇಂದ್ರದ ಸದಸ್ಯರುಗಳು ಉಪಸ್ಥಿತರಿದ್ದರು. ಸಂಯೋಜಕಿ ಅನುರಾಧ ಸ್ವಾಗತಿಸಿ, ಹೇಮಾವತಿ ಡಿ.ಎಸ್ ವಂದಿಸಿದರು.





