ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಫಲಿತಾಂಶಗಳು ಭಾರಿ ಕುತೂಹಲಕ್ಕೆ ಸಾಕ್ಷಿಯಾಗಿದ್ದು, ಶಿವಗಂಗಾ ಜಿಲ್ಲೆಯ ತಿರುಪತ್ತೂರು (Tirupattur) ಕ್ಷೇತ್ರದಲ್ಲಿ ಐತಿಹಾಸಿಕ ಹಾಗೂ ರೋಚಕ ಹಣಾಹಣಿ ನಡೆದಿದೆ. ಇಲ್ಲಿ ಕೇವಲ ಒಂದು ಮತದ ಅಂತರದಿಂದ ಅಭ್ಯರ್ಥಿಯೊಬ್ಬರ ಗೆಲುವು-ಸೋಲು ನಿರ್ಧಾರವಾಗಿದೆ.

ಚುನಾವಣೆಯ ಪ್ರಮುಖ ವಿವರಗಳು:

ನಟ ವಿಜಯ್ ಅವರ ಹೊಸ ಪಕ್ಷವಾದ ‘ತಮಿಳಗ ವೆಟ್ರಿ ಕಳಗಂ’ (TVK) ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಅವರು ಕೇವಲ ಒಂದು ಮತದ ಅಂತರದಿಂದ ಡಿಎಂಕೆ ಹಿರಿಯ ನಾಯಕ ಹಾಗೂ ಹಾಲಿ ರಾಜ್ಯ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರನ್ನು ಮಣಿಸಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ.

  • ಶ್ರೀನಿವಾಸ ಸೇತುಪತಿ (TVK) ಪಡೆದ ಮತಗಳು: 83,375
  • ಕೆ.ಆರ್. ಪೆರಿಯಕರುಪ್ಪನ್ (DMK) ಪಡೆದ ಮತಗಳು: 83,374

ಒಂದು ಮತದ ಮೌಲ್ಯ ಸಾರಿದ ಘಟನೆ:

ಮತಎಣಿಕೆಯ ಕೊನೆಯ ಹಂತದವರೆಗೂ ಡಿಎಂಕೆ ಅಭ್ಯರ್ಥಿ 30 ಮತಗಳ ಮುನ್ನಡೆಯಲ್ಲಿದ್ದರು. ಆದರೆ, ಅಂತಿಮ ಸುತ್ತಿನ ಎಣಿಕೆಯಲ್ಲಿ ಟಿವಿಎಂ (TVK) ಅಭ್ಯರ್ಥಿ ಕೇವಲ 1 ಮತದ ಅಂತರದಿಂದ ಜಯಶಾಲಿಯಾಗಿದ್ದಾರೆ.

​ವಿಶೇಷವೆಂದರೆ, ಮತದಾನದ ದಿನದಂದು ಮಸ್ಕತ್‌ನಿಂದ (Muscat) ತಮಿಳುನಾಡಿಗೆ ವಿಮಾನದಲ್ಲಿ ಬಂದು ಟಿವಿಎಂ (TVK) ಪಕ್ಷಕ್ಕೆ ಮತ ಹಾಕಿದ ಬೆಂಬಲಿಗನೊಬ್ಬನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರಿ ವೈರಲ್ ಆಗುತ್ತಿದೆ. ಪ್ರಜಾಪ್ರಭುತ್ವದಲ್ಲಿ “ಪ್ರತಿಯೊಂದು ಮತವೂ ಎಷ್ಟು ಅಮೂಲ್ಯ ಮತ್ತು ನಿರ್ಣಾಯಕ” ಎಂಬುದನ್ನು ತಿರುಪತ್ತೂರಿನ ಈ ಫಲಿತಾಂಶ ಇಡೀ ದೇಶಕ್ಕೆ ಸಾಬೀತುಪಡಿಸಿದೆ. 

Leave a Reply

Your email address will not be published. Required fields are marked *