ಸುಳ್ಯ: ಇಲ್ಲಿನ ಶಾಂತಿನಗರ ನಿವಾಸಿ ಆದರ್ಶ್ ಯೂಸುಫ್ ಹಾಜಿ ರವರು, ಅಲ್ಪಕಾಲದ ಅಸೌಖ್ಯದಿಂದಾಗಿ ಇಹಲೋಕ ತ್ಯಜಿಸಿದ್ದಾರೆ.

ಮೃತರು ಪತ್ನಿ ಕುಂಞಲಿಮ,ಪುತ್ರರಾದ ಹನೀಫ್ ಅಶ್ರಫ್, ಆರಿಫ್, ಆಸಿಫ್ ಪುತ್ರಿಯರಾದ ಜಮೀಲಾ,ಜಬೀನ ರೈಯಾನ, ಬಂಧು-ಮಿತ್ರರು ಹಾಗೂ ಅಪಾರ ಸ್ನೇಹಿತ ಬಳಗವನ್ನು ಅಗಲಿದ್ದಾರೆ. ಮಯ್ಯತ್ ನಮಾಝ್ ನಾಳೆ (ಜ.28) ಬೆಳಗ್ಗೆ 8:00 ಗಂಟೆಗೆ ಮೊಗರ್ಪಣೆ ಜುಮಾ ಮಸೀದಿಯಲ್ಲಿ ನೆರವೇರಲಿದೆ.
ಯೂಸುಫ್ ಹಾಜಿ ಯವರು ಹಲವಾರು ವರ್ಷಗಳ ಕಾಲ ಆದರ್ಶ್ ಲಾರಿಯ ಮಾಲಕರಾಗಿ ಚಾಲಕ ವೃತ್ತಿಯನ್ನು ನಿರ್ವಹಿಸಿಕೊಂಡಿದ್ದರು.
ಮೃತರ ನಿಧನಕ್ಕೆ ಹಲವು ಗಣ್ಯರು ಹಾಗೂ ಆಪ್ತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
