
ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಶ್ರೀಧರ ಎಂ ಕೆ. ಗಾಂಧೀಜಿ ಭಾವಚಿತ್ರದ ಎದುರು ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. ನಂತರ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಮತ್ತು ಎನ್ಎಸ್ಎಸ್. ಸ್ವಯಂ ಸೇವಕರು ಭಾಗವಹಿಸಿ ಪರಿಸರ ಸ್ವಚ್ಚತೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ. ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಚಂದ್ರಶೇಖರ ಎಂ. ಎನ್., ಯತೀಶ ಕೆ.ಎನ್., ರಮಾದೇವಿ., ರವಿಶಂಕರ್ ಹೊಳ್ಳ, ಅಧೀಕ್ಷಕರುಗಳಾದ ಧನಂಜಯ ಕಲ್ಲುಗದ್ದೆ, ಶಿವರಾಮ ಕೇರ್ಪಳ, ಎನ್. ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ ,ಸುನಿಲ್ ಕುಮಾರ್ ಎನ್.ಪಿ, ಎನ್ಎಸ್ಎಸ್ ಘಟಕದ ನಾಯಕರಾದ ಪ್ರಣಮ್ ವೈ, ದೀಕ್ಷಿತಾ ಕೆ.ಸಿ, ಅಪೂರ್ವ ಕೆ.ಜಿ, ಮತ್ತಿತರರು ಭಾಗವಹಿಸಿದರು.
🛒 Recommended for You:




