ಮಡಿಕೇರಿ ಭಾಗದಿಂದ ಸುಳ್ಯದ ಕಡೆ ಚಲಿಸಿತ್ತಿದ್ದ ಕಾರಿನಲ್ಲಿ ಯುವಕರು ಸರ್ಕಸ್ ತರಹ ಪುಂಡಾಟ ಮೆರೆದಿದ್ದಾರೆ. ಮೈಸೂರು ನೊಂದಣಿ ಹೊಂದಿರುವ ಹ್ಯುಂಡೈ ಅಲ್ಕಝರ್ ಕಾರು ಎಂದು ಮೇಲ್ನೋಟಕ್ಕೆ ಗುರುತಿಸಲಾಗಿದೆ. ಕಾರಿನ ಮೇಲ್ಬಾಗದ ಸನ್’ರೂಫ್ ತೆರೆದು ಆ ಭಾಗದಿಂದ ಇಬ್ಬರು ಯುವಕರು ಮೇಲೆ ನಿಂತುಕೊಂಡು.
ಇಬ್ಬರು ಹಿಂಬದಿ ಸೀಟಿನ ಎಡ ಹಾಗೂ ಬಲ ಬದಿಯ ಬಾಗಿಲಿನ ಭಾಗದಿಂದ ಮೇಲೆ ಬಂದಿದ್ದು, ಇಬ್ಬರು ಮುಂದಿನ ಎರಡೂ ಬಾಗಿಲಿನ ಚಾಲಕನ ಬದಿಯಿಂದಲೂ ಮೇಲೆದ್ದು ನಿಂತು ಹುಚ್ಚಾಟ ಮೆರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲಕನನ್ನು ಬಿಟ್ಟರೆ ಬಾಕಿ ಉಳಿದ ಎಲ್ಲಾ ಸಹಪ್ರಯಾಣಿಕರು ಅಪಾಯಕ್ಕೆ ಆಹ್ವಾನ ನೀಡುವಂತೆ ವರ್ತಿಸುತ್ತಿದ್ದುದು ವಿಡಿಯೋದಲ್ಲಿ ನೋಡಬಹುದಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ BNS ಆಕ್ಟ್ 281 IMV ಆಕ್ಟ್ನ 184 ಸೆಕ್ಷನ್ ಪ್ರಕಾರ ಪೋಲಿಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ
🛒 Recommended for You:





