ಮಳೆಗಾಲ ಪ್ರಾಂಭವಾದಾಗಿನಿಂದ ತೊಡಿಕಾನ ಫೀಡರ್ ನಿಂದ ಸರಬರಾಜು ಆಗುವ ವಿದ್ಯುತ್ ಅರಂತೋಡು ತೊಡಿಕಾನ ಮತ್ತು ಪೆರಾಜೆ ಗ್ರಾಮಗಳಲ್ಲಿ ರಾತ್ರಿ ಹೊತ್ತು ನಿರಂತರ ಅಡಚಣೆ ಆಗುತ್ತಿದ್ದು ಈ ಬಗ್ಗೆ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಕೆ.ಡಿಪಿ ಸದಸ್ಯ ಅಶ್ರಫ್ ಗುಂಡಿ ಆರೋಪಿಸಿದ್ದಾರೆ. ರಾತ್ರಿ ಮತ್ತು ಬೆಳಗಿನ ಸಮಯದಲ್ಲಿ ವಿದ್ಯುತ್ ಅಡಚಣೆಯಾಗುವುದರಿಂದ ಬೆಳಗಿನ ಸಮಯದಲ್ಲಿ ತೆರಳುವ ಉದ್ಯೋಗಸ್ಥರಿಗೆ, ವಿದ್ಯಾರ್ಥಿಗಳಿಗೆ ಮತ್ತು ಗ್ರಾಮ ಪಂಚಾಯತ್ ನಿಂದ ಸರಬರಾಜು ಆಗುವ ಸಾರ್ವಜನಿಕ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಸುಳ್ಯ ಫೀಡರ್ ನಿಂದ ಸರಬರಾಜು ಆಗುವ ವಿದ್ಯುತ್ ಅರಂಬೂರು ವರೆಗೆ, ಚೆಸ್ಕಾಂ- ಮಡೀಕೇರಿಯಿಂದ ಸರಬರಾಜು ಆಗುವ ವಿದ್ಯುತ್ ಕಲ್ಲುಗುಂಡಿವರೆಗೆ ಹಾಗೂ ಗುತ್ತಿಗಾರು ಫೀಡರ್ ನಿಂದ ಮರ್ಕಂಜದವರೆಗೆ ವಿದ್ಯುತ್ ಸರಬರಾಜು ಆಗುತ್ತಿದ್ದರು ಮಧ್ಯದಲ್ಲಿರುವ ಪೆರಾಜೆ, ಅರಂತೋಡು ಮತ್ತು ತೊಡಿಕಾನ ಗ್ರಾಮಗಳಿಗೆ ನಿರಂತರ ವಿದ್ಯುತ್ ಅಡಚಣೆಯಾಗುತ್ತಿದೆ. ಇದರ ಬಗ್ಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಆದುದರಿಂದ ಸರಕಾರ ಸಂಬಂಧ ಪಟ್ಟ ಅಧಿಕಾರಿಗಳು, ಶಾಸಕರು, ಲೋಕಸಭಾ ಸದಸ್ಯರು ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *