
ಸುಳ್ಯ (ರಥಬೀದಿ): ಇಲ್ಲಿನ ರಥಬೀದಿ ಬಳಿ ನೀರಿನ ಪೈಪ್‌ಲೈನ್ ಒಂದರಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದ್ದು, ಸಾವರ ಲೀಟರ್ ನೀರು ರಸ್ತೆಯ ಪಾಲಾಗುತ್ತಿದೆ. ನೀರಿನ ಪೈಪ್ ಸಂಪೂರ್ಣವಾಗಿ ಒಡೆದು ಹೋಗಿದ್ದು, ಕಾರಂಜಿಯಂತೆ ನೀರು ಚಿಮ್ಮುತ್ತಿರುವುದು ಕಂಡುಬಂದಿದೆ. ರಥಬೀದಿಯಿಂದ ಹರಿದುಬಂದ ನೀರು ಬಸ್ ನಿಲ್ದಾಣದವರೆಗೂ ತಲುಪಿದ್ದು, ಪ್ರಮುಖ ಹೆದ್ದಾರಿಯ ತುಂಬೆಲ್ಲಾ ನೀರು ನಿಂತಿದೆ.
ಮಳೆ ಇಲ್ಲದೆ ಕಂಗಾಲಾದ ಜನಕ್ಕೆ ಮತ್ತೊಂದು ಶಾಕ್
ಪ್ರಸ್ತುತ ಪ್ರದೇಶದಲ್ಲಿ ಮಳೆಯಿಲ್ಲದೆ ತೀವ್ರ ನೀರಿನ ಅಭಾವ ಸೃಷ್ಟಿಯಾಗುವಂತ ಸನ್ನಿವೇಶವಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ನೀರು ಈ ರೀತಿ ರಸ್ತೆಯಲ್ಲಿ ವ್ಯರ್ಥವಾಗಿ ಪೋಲಾಗುತ್ತಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಮಳೆಯೂ ಇಲ್ಲದೆ ಕುಡಿಯಲು ನೀರಿಲ್ಲದೆ ಜನ ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಒಡೆದಿರುವ ಪೈಪ್‌ಲೈನ್ ದುರಸ್ತಿಗೊಳಿಸಿ ನೀರು ವ್ಯರ್ಥವಾಗುವುದನ್ನು ತಡೆಯಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.








