
ಸುಳ್ಯ: ಸುಳ್ಯದ ಓಡಬೈ ವಿದ್ಯಾನಗರದ ಬಳಿ ದಿನಾಂಕ 14-10-2026ನೇ ಬುಧವಾರದಂದು ‘ಪಯಸ್ವಿನಿ ಬೈಕ್ ಗ್ಯಾರೇಜ್‘ ನೂತನ ಗ್ಯಾರೇಜ್ ಶುಭಾರಂಭಗೊಂಡಿತು. ಹೋಂಡಾ ಬಿಎಸ್ 6 ಸೇರಿದಂತೆ ಎಲ್ಲಾ ಪ್ರಮುಖ ಕಂಪನಿಗಳ ದ್ವಿಚಕ್ರ ವಾಹನಗಳ ಸರ್ವೀಸ್, ಇಂಜಿನ್ ರಿಪೇರಿ, ಬ್ರೇಕ್ ರಿಪೇರಿ, ಎಲೆಕ್ಟ್ರಿಕಲ್ ಕೆಲಸ ಮುಂತಾದ ಎಲ್ಲಾ ರಿಪೇರಿ ಕೆಲಸಗಳು ಇಲ್ಲಿ ಲಭ್ಯವಿರಲಿವೆ.
ಈ ಶುಭಾರಂಭದ ಸಂದರ್ಭದಲ್ಲಿ ಹಲವು ಗಣ್ಯರು ಹಾಗೂ ಹಿತೈಷಿಗಳು ಭಾಗವಹಿಸಿ ಶುಭ ಹಾರೈಸಿದರು. ಬಜಾಜ್ ಡೀಲರ್ ರಾಮನಾಥ ಕಾನತ್ಇಲ, ಜ್ಯೋತಿ ಆಸ್ಪತ್ರೆಯ ಡಾ. ಸದಾಶಿವ ರಾವ್, ಅವಿನಾಶ್ ಹೋಂಡಾ, ರಾಜೇಶ್ ರೈ ಜಟ್ಟಿಪಳ್ಳ, ಹಮ್ಜಾ ಕತೂನ್, ಮುನೀರ್ ಜಯನಗರ, ರೆಹಮಾನ್ ಕಾವು, ಗಿರಿಧರ ಕೊಂಡಂಕೆರಿ (ಅರಂತೋಡು ಸ್ವಾಮಿ ಕೊರಗಜ್ಜ ಆಡಳಿತ ಮೊಕ್ತೇಸರ), ಲೋಕೇಶ್ ಮಾರುತಿ ಕನ್ಸ್ಟ್ರಕ್ಷನ್ ಹಾಗೂ ಸಮೀರ್ ಹಿಂದೂಸ್ತಾನ್ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಯಶಸ್ಸು ಹಾರೈಸಿದರು.
