ಬೆಂಗಳೂರು: ಪವಿತ್ರ ರಮಝಾನ್ ತಿಂಗಳಿನಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಒಳರೋಗಿಗಳ ಜೊತೆಯಲ್ಲಿರುವ ಸಹಚರರಿಗೆ (Attendants) ಅನುಕೂಲವಾಗುವಂತೆ ‘ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (MMYC) ಬೆಂಗಳೂರು’ ಘಟಕವು ಉಚಿತ ಸಹರಿ ಸೇವೆಯನ್ನು (Free Suhoor Service) ಘೋಷಿಸಿದೆ.

​ಪವಿತ್ರ ರಮಝಾನ್ ತಿಂಗಳಾದ್ಯಂತ ಈ ಸೇವೆಯು ಲಭ್ಯವಿರಲಿದ್ದು, ಆಸ್ಪತ್ರೆಯಲ್ಲಿರುವ ರೋಗಿಗಳ ಆರೈಕೆಯಲ್ಲಿರುವವರು ಸಹರಿ ಊಟಕ್ಕಾಗಿ ಪರದಾಡುವುದನ್ನು ತಪ್ಪಿಸಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಪರ್ಕಿಸುವುದು ಹೇಗೆ?

ಈ ಉಚಿತ ಸಹರಿ ಸೇವೆಯ ಅಗತ್ಯವಿರುವವರು ಅಥವಾ ನಿಮ್ಮ ಪರಿಚಯಸ್ಥರಿಗೆ ಈ ಸೇವೆಯ ಅವಶ್ಯಕತೆಯಿದ್ದರೆ, ದಯವಿಟ್ಟು ಹಿಂದಿನ ದಿನ ಸಂಜೆ 7:30ರ ಒಳಗೆ ಮಾಹಿತಿಯನ್ನು ನೀಡಬೇಕಾಗಿ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಬುಕ್ಕಿಂಗ್‌ಗಾಗಿ ವಾಟ್ಸಾಪ್ ಸಂಖ್ಯೆ:

90666 04090 (MMYC HELPLINE)

Leave a Reply

Your email address will not be published. Required fields are marked *