
ಸಂಪಾಜೆ ಗ್ರಾಮದ ಅಭಿವೃದ್ಧಿ ದೇಶಕ್ಕೆ ಮಾದರಿ:ಎಂ. ಎ. ಗಫೂರ್
ಗ್ರಾಮಗಳ ಅಭಿವೃದ್ಧಿ ಯಿಂದ ನಿಜವಾದ ರಾಮ ಸ್ವರಾಜ್ಯ ಮೂಲಕ ಗಾಂಧೀಜಿ ಯ ಕನಸನ್ನು ನನಸು ಮಾಡಿ ಸಂಪಾಜೆ ಗ್ರಾಮ ಪಂಚಾಯತ್ ದೇಶಕ್ಕೆ ಮಾದರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ. ಎ. ಗಫೂರ್ ಹೇಳಿದರು
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ರವರ ವಿಶೇಷ ಮುತುವರ್ಜಿ ಯಿಂದ ಮುಖ್ಯ ಮಂತ್ರಿಯವರ ವಿಶೇಷ ಅನುದಾನ ದಲ್ಲಿ ನಿರ್ಮಿಸಿದ ಸರ್ವ ಋ ತು ಕಾಂಕ್ರೀಟ್ ರಸ್ತೆ ಗಳು ಕರ್ನಾಟಕ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಎಂ ಎಲ್ ಸಿ ಅನುದಾನ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸ್ವಂತ ನಿದಿಯಡಿ ಸುಮಾರು 15 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡ ವಿವಿಧ ಕಾಮಗಾರಿ ಗಳನ್ನು ಉದ್ಘಾಟನೆ ಮಾಡಿ ಸುಮಾರು 500 ಕ್ಕೂ ಮಿಕ್ಕಿದ ಫಲನುಭವಿಗಳಿಗೆ ಕೃಷಿ ಉಪಕರಣ, ಹೊಲಿಗೆ ಯಂತ್ರ, ಗಳ ವಿತರಣಾ ಪ್ರಾಥಮಿಕ ಶಾಲೆಯ ಲೈಬ್ರರಿ, ಅಕ್ಷರ ದಾಸೋಹ ಕಟ್ಟಡ, ಗ್ರಂಥಾಲಯ, ಸುಸಜ್ಜಿತ ಅಂಗನವಾಡಿ, ವಿಸ್ತ್ರತ ಕಟ್ಟಡ ಉದ್ಘಾಟನೆ ಜರಗಿತು
ಅಧ್ಯಕ್ಷ ತೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು ವಹಿಸಿದ್ದರು
ಫಲನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ಮಾತನಾಡಿ ಸಂಪಾಜೆ ಗ್ರಾಮ ಸರ್ವ ಧರ್ಮ ಸೌಹಾರ್ದತೆಯ ಪ್ರತೀಕ, ಎಲ್ಲರೂ ಪಕ್ಷ ಭೇದ ಜಾತಿ ಭೇದ ಮರೆತು ಒಂದಾದರೆ ಗ್ರಾಮಗಳ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಮುಂದೆಯು ನಾನು ಸಂಪೂರ್ಣ ವಾಗಿ ಸಹಕಾರ ನೀಡುವೆ, ಎಂದರು
ಮುಖ್ಯ ಅತಿಥಿಗಳಾಗಿ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷ ಶ್ರೀಮತಿ ಶಾಲೆಟ್ ಪಿಂಟೋ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಓಲ್ಗಾ ಡಿ ಸೋಜಾ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಕ್ರಮ ನಿರ್ವಾಹಕ ಇಂಜಿನಿಯರ್ ಫಯಾಜ್ ಅಹ್ಮದ್, ಕುಡಿಯುವ ನೀರು, ನೈರ್ಮಲ್ಯ ವಿಭಾಗ ಇಂಜಿನಿಯರ್ ಶ್ರೀಮತಿ ಚೈತ್ರಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಸ್ವಾಗತಿಸಿ, ಉಪಾಧ್ಯಕ್ಷ ಎಸ್. ಕೆ. ಹನೀಫ್ ವಂದಿಸಿದರು




