ಕಾಸರಗೋಡು: ಪ್ರಸಿದ್ಧ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ ಹಾಗೂ ವ್ಲಾಗರ್ ಆಗಿದ್ದ ಚಿನ್ನು ಪಾಪು (ರೇಷ್ಮಾ) ಆತ್ಮಹತ್ಯೆ ಮಾಡಿಕೊಂಡ ಸರಿಯಾಗಿ ಒಂದು ವಾರದ ನಂತರ, ಅವರ ಆಪ್ತ ಸ್ನೇಹಿತ ಸಂದೇಶ್ ಕೂಡ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಚಿನ್ನು ಪಾಪು ಸಾವಿನ ನಂತರ ತೀವ್ರ ಮಾನಸಿಕ ಒತ್ತಡದಲ್ಲಿದ್ದ, ಉಳಿಯತಡ್ಕುವಿನ ಮನ್ನಿಪಾಡಿ ಮನೆಯ ನಾರಾಯಣ ನಾಯಕ್ ಮತ್ತು ಸರೋಜಾ ದಂಪತಿಯ ಪುತ್ರ ಸಂದೇಶ್ (29) ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ., ಇಂದು (ಭಾನುವಾರ) ಕಾಸರಗೋಡಿನ ಚೌಕಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ವಿವರ:

ಕಳೆದ ಸೋಮವಾರ (ಫೆಬ್ರವರಿ 9) ಕಾಸರಗೋಡಿನ ಬಾಡಿಗೆ ಮನೆಯಲ್ಲಿ ಚಿನ್ನು ಪಾಪು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಚಿನ್ನು ಅವರ ಸಾವಿನ ನಂತರ ಪೊಲೀಸರು ಸಂದೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಚಿನ್ನು ಪಾಪು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು. ಒಂದೇ ವಾರದಲ್ಲಿ ನಡೆದ ಈ ಎರಡು ಸಾವುಗಳು ಅವರ ಅಭಿಮಾನಿಗಳು ಮತ್ತು ಸ್ಥಳೀಯರಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.

Leave a Reply

Your email address will not be published. Required fields are marked *