ಆರ್ಲಪದವು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಬೇಸಿಗೆಯ ತಾಪಮಾನ ಏರಿಕೆಯಾಗಿದ್ದು, ಜನಜೀವನ ಹೈರಾಣಾಗಿದೆ. ಆದರೆ, ಆರ್ಲಪದವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ದಿಢೀರ್ ಮಳೆಯಾಗುವ ಮೂಲಕ ಇಳೆಗೆ ತಂಪೆರೆದಿದೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು, ಜನರು ಪರಿತಪಿಸುತ್ತಿದ್ದಾರೆ. ಆದರೆ ಆರ್ಲಪದವಿನಲ್ಲಿ ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದ ಬಿಸಿಲ ವಾತಾವರಣವಿದ್ದರೂ, ಹಠಾತ್ ಸುರಿದ ಈ ಮಳೆಯಿಂದಾಗಿ ವಾತಾವರಣದಲ್ಲಿ ಕೊಂಚ ತಂಪಿನ ಅನುಭವವಾಗಿದೆ.
ವಿಪರೀತ ಸೆಖೆಯಿಂದ ಕಂಗಾಲಾಗಿದ್ದ ಸ್ಥಳೀಯರಿಗೆ ಈ ‘ಬೇಸಿಗೆ ಮಳೆ’ ಸಮಾಧಾನ ತಂದಿದೆ.




