ಸುಳ್ಯ: “ಆತ್ಮ ಸಂಸ್ಕರಣೆಯ ಉಪವಾಸ ವ್ರತವು ದಾನ ಧರ್ಮಗಳಿಂದ ಧನ್ಯಗೊಳ್ಳುತ್ತದೆ” ಎಂಬ ಧ್ಯೇಯದೊಂದಿಗೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಜಮೀಯ್ಯತುಲ್ ಫಲಾಹ್ (ದ.ಕ. ಮತ್ತು ಉಡುಪಿ ಜಿಲ್ಲೆ) ಇದರ ಸುಳ್ಯ ತಾಲೂಕು ಘಟಕದ ವತಿಯಿಂದ ಪವಿತ್ರ ರಂಜಾನ್ ಪ್ರಯುಕ್ತ ಅರ್ಹ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಗಾಂಧಿನಗರದಲ್ಲಿರುವ ಸಂಸ್ಥೆಯ ಕಚೇರಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ತಾಲೂಕಿನ ಆಯ್ದ 100 ಅರ್ಹ ಫಲಾನುಭವಿ ಕುಟುಂಬಗಳಿಗೆ ಸುಮಾರು ರೂ. 2 ಲಕ್ಷ ಮೌಲ್ಯದ ದಿನಬಳಕೆಯ ಆಹಾರ ಸಾಮಗ್ರಿಗಳ ಕಿಟ್ ಅನ್ನು ವಿತರಿಸಲಾಯಿತು.
ಉದ್ಘಾಟನೆ ಮತ್ತು ಮುಖ್ಯ ಅತಿಥಿಗಳ ನುಡಿ
ಕಾರ್ಯಕ್ರಮವನ್ನು ಕಿಟ್ ವಿತರಿಸುವ ಮೂಲಕ ಉದ್ಘಾಟಿಸಿದ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಎಂ. ಮುಸ್ತಫ ಅವರು ಮಾತನಾಡಿ:
”ಪವಿತ್ರ ರಂಜಾನ್ ತಿಂಗಳು ಬಡವನ ಹಸಿವಿನ ಅರಿವಾಗಲು ಎಲ್ಲರಿಗೂ ಕಡ್ಡಾಯ ಉಪವಾಸ ವ್ರತವನ್ನು ಇಸ್ಲಾಂ ಕಲ್ಪಿಸಿದೆ. ದಾನ ಧರ್ಮಗಳ ಮೂಲಕ ದೇವರ ಸಂಪ್ರೀತಿಯನ್ನು ಗಳಿಸಲು ಸಾಧ್ಯ. ಜಮೀಯ್ಯತುಲ್ ಫಲಾಹ್ ಸಂಸ್ಥೆಯು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ,” ಎಂದು ತಿಳಿಸಿದರು.
ಅಧ್ಯಕ್ಷತೆ ಮತ್ತು ಉಪಸ್ಥಿತಿ
ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಅಡ್ವೋಕೇಟ್ ಮೂಸ ಕುಂಞ ಪೈಂಬಚ್ಚಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪ್ರಮುಖರಾದ:
- ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು
- ಇಕ್ಬಾಲ್ ಎಲಿಮಲೆ, ಹಸೈನಾರ್ ವಳಲಂಬೆ
- ಶಾಫಿ ಕುತ್ತಾಮೊಟ್ಟೆ, ಅಬ್ದುಲ್ ಖಾದರ್ ಸಂಗಮ್
- ಹಸೈನಾರ್ ಹಾಜಿ ಗೊರಡ್ಕ, ಅಬೂಬಕ್ಕರ್ ಪಾರೆಕ್ಕಲ್
- ಅಮೀರ್ ಕುಕ್ಕುಂಬಳ, ಎಸ್. ಪಿ ಅಬೂಬಕ್ಕರ್
- ಡಾ. ಮಹಮ್ಮದ್ ಕುಂಭಕ್ಕೋಡು
- ಇಬ್ರಾಹಿಂ ನೀರಾಬಿದಿರೆ ದುಗ್ಗಲಡ್ಕ
- ಹಂಝ ದುಗ್ಗಲಡ್ಕ, ಎಸ್. ಕೆ. ಹನೀಫ್ ಕಲ್ಲುಗುಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




