ಸಾಮಾಜಿಕ ಜಾಲತಾಣದಲ್ಲಿ ಹಳೆಯ ಶಾಲಾ ದಿನಗಳ ಮಧುರ ನೆನಪುಗಳನ್ನು ಮರುಕಳಿಸುವಂತೆ ಮಾಡಿದ ನಮ್ಮ ಸುಳ್ಯ ಇನ್‌ಸ್ಟಾಗ್ರಾಮ್ ಅನಿಮೇಷನ್ ರೀಲ್ಸ್ ಭಾರೀ ವೈರಲ್ ಆಗಿದ್ದು, ಬರೋಬ್ಬರಿ ಒಂದು ಮಿಲಿಯನ್,ಅಂದರೆ ಹತ್ತು ಲಕ್ಷ ವೀಕ್ಷಣೆಗಳನ್ನು ಪಡೆದು ದಾಖಲೆ ಬರೆದಿದೆ.

ಮಳೆ, ಕತ್ತಲೆ ಆವರಿಸಿದ ತರಗತಿ, ಟೀಚರ್ ರಜೆ, ಅಂದರೆ ಸ್ವರ್ಗ ಎಂಬ ಸಾಲುಗಳೊಂದಿಗೆ, ಕಿಟಕಿಯಿಂದ ಮಳೆ ನೋಡುತ್ತಿರುವ ಶಾಲಾ ಮಕ್ಕಳ ಸುಂದರ ಅನಿಮೇಷನ್ ಹೊಂದಿರುವ ಈ ವಿಡಿಯೋ, ಕೇವಲ ಕೆಲವೇ ದಿನಗಳಲ್ಲಿ ಎಂಬತ್ತೈದು ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಇಪ್ಪತ್ತೆರಡು ಸಾವಿರಕ್ಕೂ ಹೆಚ್ಚು ಶೇರ್ಸ್ ಪಡೆಯುವ ಮೂಲಕ ನೆಟ್ಟಿಗರ ಬಾಲ್ಯದ ಸುವರ್ಣ ದಿನಗಳನ್ನು ನೆನಪಿಸುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *