ಸುಳ್ಯ: ಇತ್ತೀಚೆಗೆ ಪ್ರಕಟವಾದ ಕರ್ನಾಟಕ ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಸುಳ್ಯದ ಶಾರದಾ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಯಿಷತ್ ಅಝ್ಮೀನಾ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಒಟ್ಟು 600 ಅಂಕಗಳಿಗೆ 518 ಅಂಕಗಳನ್ನು ಗಳಿಸುವ ಮೂಲಕ ಇವರು ಉನ್ನತ ಶ್ರೇಣಿಯಲ್ಲಿ (Distinction) ತೇರ್ಗಡೆಯಾಗಿದ್ದಾರೆ. ಅಶ್ರಫ್ ಮತ್ತು ಫಾತಿಮಾ ದಂಪತಿಯ ಪುತ್ರಿಯಾಗಿರುವ ಆಯಿಷತ್ ಅಜ್ಮೀನಾ ಅವರ ಈ ಅದ್ಭುತ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಊರಿನ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
🛒 Recommended for You:
ವಿದ್ಯಾರ್ಥಿನಿಯ ಮುಂದಿನ ಉನ್ನತ ವಿದ್ಯಾಭ್ಯಾಸ ಹಾಗೂ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಪೋಷಕರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.




