ಸುಳ್ಯ: ದಿನದಿಂದ ದಿನಕ್ಕೆ ಏರುತ್ತಿರುವ ಬೇಸಿಗೆಯ ಬಿಸಿಲಿನ ಝಳಕ್ಕೆ ಜನಸಾಮಾನ್ಯರು ಹೈರಾಣಾಗಿದ್ದಾರೆ. ಈ ನಡುವೆ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ತಂಪಾದ ಅನುಭವ ನೀಡಲು ‘BMA’ ತರಕಾರಿ ಮತ್ತು ಹಣ್ಣಿನ ಅಂಗಡಿಯು ವಿನೂತನ ಹೆಜ್ಜೆಯಿಟ್ಟಿದೆ.

ಬಿಸಿಲಿನ ಬೇಗೆಯಿಂದ ಬಳಲಿ ಬರುವ ಗ್ರಾಹಕರಿಗೆ ಆರಾಮದಾಯಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ಅಂಗಡಿಯಲ್ಲಿ ಹೊಸದಾಗಿ ವಾಟರ್ ಸ್ಪ್ರೇಯರ್ (Water Sprayer) ಅಳವಡಿಸಲಾಗಿದೆ. ಇದು ತಣ್ಣನೆಯ ನೀರಿನ ಸಿಂಪಡಣೆ ಮಾಡುತ್ತಿದ್ದು, ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಲು ಬರುವ ಗ್ರಾಹಕರಿಗೆ ಬಿಸಿಲಿನ ತಾಪದ ನಡುವೆಯೂ ಆಹ್ಲಾದಕರ ಹಾಗೂ ತಂಪಾದ ವಾತಾವರಣವನ್ನು ಒದಗಿಸುತ್ತಿದೆ.
ಇದರಿಂದಾಗಿ ಬಿಸಿಲಿನಲ್ಲಿ ಬರುವ ಗ್ರಾಹಕರಿಗೆ ರಿಲೀಫ್ ಸಿಕ್ಕಂತಾಗಿದ್ದು, ಜೊತೆಗೆ ಹಣ್ಣು ಮತ್ತು ತರಕಾರಿಗಳೂ ದೀರ್ಘಕಾಲ ತಾಜಾವಾಗಿರಲು ಈ ಸ್ಪ್ರೇಯರ್ ನೆರವಾಗುತ್ತಿದೆ. ಅಂಗಡಿಯ ಈ ಗ್ರಾಹಕ ಸ್ನೇಹಿ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ.




