ಪುತ್ತೂರು: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ 15 ವರ್ಷದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಪುತ್ತೂರಿನ ಗಡಿಯಾರ ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

​ಮೃತ ಬಾಲಕನನ್ನು ನೇರಳಕಟ್ಟೆ ಸಮೀಪದ ಕೋಡಾಜೆ ನಿವಾಸಿ ಶಹೀರ್ (15) ಎಂದು ಗುರುತಿಸಲಾಗಿದೆ. ಈತ ನೇರಳಕಟ್ಟೆ ಸಮೀಪದ ಗಣೇಶನಗರದ ಫ್ಲಾಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶರೀಫ್ ಅವರ ಪುತ್ರ.

​ಶಾಲಾ ರಜೆಯ ಹಿನ್ನೆಲೆಯಲ್ಲಿ ಶಹೀರ್, ಗಡಿಯಾರದಲ್ಲಿರುವ ತನ್ನ ಅಜ್ಜನ ಮನೆಗೆ ತೆರಳಿದ್ದನು. ಅಲ್ಲಿ ಆಟೋ ರಿಕ್ಷಾ ಚಾಲಕ ಹಾಗೂ ಸಮಾಜಸೇವಕ ಪುತ್ತಾಕ ಅವರೊಂದಿಗೆ ಇದ್ದಾಗ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಶಹೀರ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

​ಮೃತ ಶಹೀರ್ ಪುತ್ತೂರಿನ ಮೌಂಟೇನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಬಾಲಕನು ತನ್ನ ತಂದೆ, ತಾಯಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.

Leave a Reply

Your email address will not be published. Required fields are marked *