ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ಸಾಹಿತ್ಯಿಕ ಆಸಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ತ್ವೈಬಾ ಸ್ಟೂಡೆಂಟ್ಸ್ ಯೂನಿಯನ್’ನ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಅಧ್ಯಕ್ಷರಾಗಿ ಹಾಫಿಝ್ ಸ್ವಾಲಿಹ್ ಕಂಡಂಗಾಲ, ಪ್ರಧಾನ ಕಾರ್ಯದರ್ಶಿಯಾಗಿ ರಮೀಝ್ ಕುಂಡಾರು ಹಾಗೂ ಕೋಶಾಧಿಕಾರಿಯಾಗಿ ಸಿದ್ದೀಕ್ ಈಶ್ವರಮಂಗಲ, ಉಪಾಧ್ಯಕ್ಷರಾಗಿ ಶಾಮಿಲ್ ಬಂದಿಯೋಡ್, ಜೊತೆ ಕಾರ್ಯದರ್ಶಿಗಳಾಗಿ ಶರಫುದ್ದೀನ್ ಎಮ್ಮೆಮ್ಮಾಡು, ಸುಹೈಲ್ ಅಜ್ಜಾವರ, ಝಿಯಾದ್ ಮೇನಾಲ, ಹುಸೈನ್ ಎಮ್ಮೆಮ್ಮಾಡು ಹಾಗೂ ಕ್ಯಾಂಪಸ್ ಲೀಡರ್ಸ್ ಆಗಿ ಹಾಫಿಝ್ ಶಂಶೀರ್ ಮತ್ತು ಹಸೈನ್ ಎಮ್ಮೆಮ್ಮಾಡು, ಸದಸ್ಯರಾಗಿ ಹಾಫಿಝ್ ಇಮ್ತಿಯಾಝ್, ಹಾಫಿಝ್ ಯೂನಸ್ ಮಾಲ್ದಾರೆ ಹಾಗೂ ದಾನಿಶ್ ಮಾಲ್ದಾರೆ ಆಯ್ಕೆಯಾಗಿದ್ದಾರೆ. ಈ ಒಕ್ಕೂಟದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಸಮಾಜ, ಬರಹ-ಭಾಷಣ ತರಬೇತಿ, ಲ್ಯಾಂಗ್ವೇಜ್ ಹಬ್ ಹಾಗೂ ಮಕ್ಕಳ ಪ್ರತಿಭಾ ಪ್ರದರ್ಶನಕ್ಕಾಗಿ ವಿಶೇಷ ‘ಫೆಸ್ಟ್’ಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *