ಬೆಂಗಳೂರಿಗೆ ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಹೋದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜಾ

ಅನುದಾನ ಬಿಡುಗಡೆ ಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವರಿಗೆ ಒತ್ತಾಯ.

ಸತ್ಯಕುಮಾರ್ ಆಡಿಂಜಾ ನೇತೃತ್ವದ ಕಾಂಗ್ರೆಸ್ ನಿಯೋಗದ ಮನವರಿಕೆಗೆ ಸಚಿವರ ಸ್ಪಂದನೆ

ಸುಳ್ಯ ತಾಲೂಕಿನ ನಾರ್ಕೋಡು – ಆಲೆಟ್ಟಿ – ಬಡ್ಡಡ್ಕ ಲೋಕೋಪಯೋಗಿ ರಸ್ತೆಯು ಕರ್ನಾಟಕ ಕೇರಳ ಅಂತರಾಜ್ಯ ಸಂಪರ್ಕ ರಸ್ತೆಯಾಗಿದ್ದು, ಅಗಲ ಕಿರಿದಾಗಿ, ಹೊಂಡ ಗುಂಡಿಗಳಿಂದ ಜನ ಸಂಚಾರಕ್ಕೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸುವಂತೆ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯಕುಮಾರ್ ಆಡಿಂಜಾ ರವರು ಕಳೆದ ವರ್ಷವೇ ಮನವಿ ಮಾಡಿದ್ದರು.

ಎ. 23ರಂದು ಸತ್ಯಕುಮಾರ್ ಆಡಿಂಜಾ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಭೇಟಿ ಯಾಗಿ ಕಳೆದ 35 ವರ್ಷಗಳಿಂದ ಅಭಿವೃದ್ಧಿ ಕಾಣದೆ ತೀರಾ ಹದೆಗೆಟ್ಟಿರುವ ನಾರ್ಕೋಡು – ಆಲೆಟ್ಟಿ – ಬಡ್ಡಡ್ಕ ರಸ್ತೆಗೆ ಕೂಡಲೇ ಅನುದಾನ ಬಿಡುಗಡೆಗೊಳಿಸಿ ತುರ್ತು ಅಭಿವೃದ್ಧಿಗೊಳಿಸುವಂತೆ ಸತ್ಯಕುಮಾರ್ ಆಡಿಂಜಾ ಮತ್ತು ಕಾಂಗ್ರೆಸ್ ಮುಖಂಡರು ಮನವರಿಕೆ ಮಾಡಿದರು.

ಈ ಬಗ್ಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರು ಅನುದಾನ ಬಿಡುಗಡೆಗೊಳಿಸಿ ತುರ್ತು ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ನಿಯೋಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾ ಪರಿಷತ್ ಸದಸ್ಯ ದೇವಪ್ಪ ನಾಯ್ಕ ಹೊನ್ನೆಡಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದಿನ್, ನಗರ ಪಂಚಾಯತ್ ಮಾಜಿ ಸದಸ್ಯ ಶಿವಕುಮಾರ್ ಕಂಡಡ್ಕ, ಕಾಂಗ್ರೆಸ್ ಮುಖಂಡರಾದ ರಕ್ಷಿತ್ ದೊಡ್ಡಡ್ಕ, ಕೇಶವ ಮೊರಂಗಲ್ಲು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *