ಪೈಚಾರ್: ಬದ್ರಿಯಾ ಜುಮಾ ಮಸೀದಿ ಪೈಚಾರ್ ಇದರ 2025-26ನೇ ಸಾಲಿನ ಮಹಾಸಭೆಯು ಜೂ.21 ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು.
ಮಸೀದಿ ಜಮಾಅತ್ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಪಿ. ಅವರ ಘನ ಅಧ್ಯಕ್ಷತೆಯಲ್ಲಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಶಮೀರ್ ನಈಮಿ ಖತೀಬ್ ಪೈಚಾರ್ ಅವರು ದುಆ ನೆರವೇರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು.
ಸಭೆಯಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿಯಾದ ಹನೀಫ್ ಪಿ.ಕೆ. ಅವರು ಕಳೆದ ಸಾಲಿನ ವರದಿ ಹಾಗೂ ಲೆಕ್ಕಪತ್ರ ಮಂಡನೆಯನ್ನು ಮಾಡಿ, ಜಮಾಅತ್ ಸದಸ್ಯರ ಅನುಮೋದನೆ ಪಡೆದುಕೊಂಡರು. ಮಹಾಸಭೆಯಲ್ಲಿ ಮಸೀದಿ ಕಮಿಟಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಜಮಾಅತ್ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಪಿ ಮರುಆಯ್ಕೆ

ಜಮಾತಿನ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಪಿ ಅವರು ಮತ್ತೊಮ್ಮೆ ಸರ್ವಾನುಮತದಿಂದ ಮರು ಆಯ್ಕೆಯಾಗಿದರು. ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ ಬೋಳುಬೈಲು ಹಾಗೂ ಉಪಾಧ್ಯಕ್ಷರಾಗಿ ಮುಜೀಬ್ ಪೈಚಾರ್, ಖಜಾಂಜಿಯಾಗಿ ಹನೀಫ್ ಬಿ.ಎಚ್, ಜೊತೆ ಕಾರ್ಯದರ್ಶಿಯಾಗಿ ಇಸಾಕ್, ಅಝರುದ್ದೀನ್, ಸೇರಿದಂತೆ ಪದಾಧಿಕಾರಿಗಳಾಗಿ ಇಬ್ರಾಹಿಂ ಎಸ್.ಎ, ಬಶೀರ್ ಆರ್.ಬಿ, ಉನೈಸ್ ಎಸ್.ಎಂ, ಆಬಿದ್, ಲತೀಫ್ ಟಿ.ಎ ಅಧಿಕೃತವಾಗಿ ನೇಮಕಗೊಳಿಸಲಾಯಿತು. ಸಭೆಯ ಆರಂಭದಲ್ಲಿ ಮುಜೀಬ್ ಪೈಚಾರ್ ಅವರು ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *