ಸುಳ್ಯ: ಶಾಂತಿನಗರದ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ನವೀಕರಣ ಮತ್ತು ಬ್ರಹ್ಮಕಲಶ ಪ್ರತಿಷ್ಠಾಪನಾ ಮಹೋತ್ಸವವು ಮುಂಬರುವ ಏಪ್ರಿಲ್ ತಿಂಗಳಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ಈ ಪ್ರಯುಕ್ತ ವಿವಿಧ ವಲಯಗಳ ಪ್ರಮುಖರ ಪೂರ್ವಭಾವಿ ಸಭೆಯು ಫೆಬ್ರವರಿ 27ರ ಶುಕ್ರವಾರ ಸಂಜೆ 6.00 ಗಂಟೆಗೆ ಕುಂಭಕೋಡು ಅಚ್ಚುತ ಭಟ್ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು.

ಸುಳ್ಯ ನಗರದ ಶಾಂತಿನಗರ, ಹಳೇಗೇಟ್ ಮತ್ತು ಜಾಲ್ಸೂರು ಗ್ರಾಮದ ಸೋಣಂಗೇರಿ, ಪಿಲಿಕೊಡಿ, ಕುಕ್ಕುಂದೂರು ಪರಿಸರದ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಪದಾಧಿಕಾರಿಗಳು:

ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನ ಕ್ಷೇತ್ರ ಸೇವಾ ಸಮಿತಿ (ರಿ.) ಪೈಚಾರ್ ಇದರ ಬ್ರಹ್ಮಕಲಶೋತ್ಸವ ಸಮಿತಿಯ ಹಾಗೂ ಸೇವಾ ಸಮಿತಿಯ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

  • ಅಧ್ಯಕ್ಷರು: ಎಂ. ಸುಂದರ ರಾವ್
  • ಕಾರ್ಯಾಧ್ಯಕ್ಷರು: ಶ್ರೀ ದೇವಿ ಪ್ರಸಾದ್ (ಇಂಜಿನಿಯರ್)
  • ಪ್ರಧಾನ ಕಾರ್ಯದರ್ಶಿ: ಯಶವಂತ ಪಟ್ರುಕೋಡಿ
  • ಕೋಶಾಧಿಕಾರಿ: ಕೇಶವ ಮಾಸ್ಟರ್
  • ಸಂಚಾಲಕರು: ರಾಜೇಶ್ ಶೆಟ್ಟಿ ಮೇನಾಲ
  • ಉಪಾಧ್ಯಕ್ಷರು: ಚಿದಾನಂದ ವಿದ್ಯಾನಗರ
  • ಸಹ-ಸಂಚಾಲಕರು: ನಾರಾಯಣ ಎಸ್. ಎಂ. (ಶಾಂತಿನಗರ)
  • ಕಾರ್ಯದರ್ಶಿಗಳು: ರಾಘವ ಪೆರಾಜೆ, ಜಗದೀಶ್ ಎನ್. ಆರ್.
  • ಗೌರವ ಸಲಹೆಗಾರರು: ಚಂದ್ರ ರಾವ್, ಆನಂದ ಬೆಟ್ಟಂಪಾಡಿ, ದಾಮೋದರ ಮಂಚಿ, ಬಾಲಗೋಪಾಲ ಸೇರ್ಕಜೆ, ಮಲ್ಲೇಶ್ ಬೆಟ್ಟಂಪಾಡಿ.
  • ಸೇವಾ ಸಮಿತಿಯ ಅಧ್ಯಕ್ಷರು: ವೇಣುಗೋಪಾಲ ಎಸ್.
  • ಮುಕ್ತೇಸರರು: ಸಂಜೀವ

ಇವರಲ್ಲದೆ ಪ್ರಮುಖರಾದ ಶ್ರೀಮತಿ ಹರ್ಷ ಕರುಣಾಕರ, ಸಿಂಧೂರ ಶೇಟ್, ಸಂಧ್ಯಾ ರಾವ್, ಹಳೇಗೇಟ್ ಚಂದ್ರಶೇಖರ, ರಾಧಾಕೃಷ್ಣ, ಕೃಷ್ಣ ರಾಜು, ಪ್ರೇಮ, ಲೀಲಾವತಿ ಸೇರಿದಂತೆ ಊರಿನ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದು, ಮುಂಬರುವ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.

Leave a Reply

Your email address will not be published. Required fields are marked *