ಹುಬ್ಬಳ್ಳಿ: ನಗರದ ದೇಶಪಾಂಡೆ ನಗರದಲ್ಲಿರುವ ಪ್ರವಾಸಿ ಮಂದಿರದಲ್ಲಿ ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ಧಾರವಾಡ ಜಿಲ್ಲಾ ಮತ್ತು ಹುಬ್ಬಳ್ಳಿ ಘಟಕದ ಪದಾಧಿಕಾರಿಗಳ ಮಹತ್ವದ ಸಭೆ ಯಶಸ್ವಿಯಾಗಿ ಜರುಗಿತು.

​ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅಭಿಯಾನದ ರಾಜ್ಯಾಧ್ಯಕ್ಷರಾದ ಉನೈಸ್ ಪೆರಾಜೆ ಅವರು, “ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಯ ಆಶಯದೊಂದಿಗೆ ಮುಂಬರುವ ಮಾರ್ಚ್ 31 ರಿಂದ ರಾಜ್ಯಾದ್ಯಂತ ‘ಕರ್ನಾಟಕ ಯಾತ್ರೆ ಜನ ಜಾಗೃತಿ ಜಾಥಾ’ವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬೃಹತ್ ಜಾಥಾಕ್ಕೆ ಧಾರವಾಡ ಜಿಲ್ಲಾ ಘಟಕವು ಸಂಪೂರ್ಣ ಬೆಂಬಲ ಹಾಗೂ ಸಹಕಾರ ನೀಡಬೇಕು” ಎಂದು ಕೋರಿದರು.

ಶಿಕ್ಷಣ ಬಜೆಟ್ ಪೋಸ್ಟರ್ ಬಿಡುಗಡೆ:

ಸಭೆಯಲ್ಲಿ ಸರ್ಕಾರಕ್ಕೆ ಸಲ್ಲಿಸಲು ಸಿದ್ಧಪಡಿಸಲಾಗಿರುವ ‘ಶಿಕ್ಷಣ ಬಜೆಟ್’ನ ಪ್ರತಿಯನ್ನು ಒಳಗೊಂಡ ವಿಶೇಷ ಪೋಸ್ಟರ್ ಅನ್ನು ಇದೇ ಸಂದರ್ಭದಲ್ಲಿ ಗಣ್ಯರು ಬಿಡುಗಡೆಗೊಳಿಸಿದರು.

ಉಪಸ್ಥಿತರಿದ್ದ ಗಣ್ಯರು:

ಈ ಸಭೆಯಲ್ಲಿ ಅಭಿಯಾನದ ಉತ್ತರ ಕರ್ನಾಟಕ ಅಧ್ಯಕ್ಷರಾದ ಪಾಪು ದಾರೆ, ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಮಂಜುನಾಥ್ ಲುತಿಮಠ, ಧಾರವಾಡ ಜಿಲ್ಲಾಧ್ಯಕ್ಷ ಪ್ರವೀಣ್ ಗಾಯಕ್ವಾಡ್, ಧಾರವಾಡ ಹಾಗೂ ಹುಬ್ಬಳ್ಳಿ ತಾಲೂಕು ಅಧ್ಯಕ್ಷರುಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *