
ನಮ್ಮ ಹೆಮ್ಮೆಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂದು ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದೆ. ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 25 ಮಿಲಿಯನ್ (2.5 ಕೋಟಿ) ಫಾಲೋವರ್ಸ್ ಗಡಿ ದಾಟುವ ಮೂಲಕ ಆರ್ಸಿಬಿ ಐತಿಹಾಸಿಕ ಸಾಧನೆ ಮಾಡಿದೆ.
ಈ ಮೂಲಕ ಐಪಿಎಲ್ ಟೂರ್ನಿಯಲ್ಲಿಯೇ ಅತಿ ಹೆಚ್ಚು ಫ್ಯಾನ್ ಬೇಸ್ (ಅಭಿಮಾನಿ ಬಳಗ) ಹೊಂದಿರುವ ಫ್ರಾಂಚೈಸಿ ಎಂಬ ಕೀರ್ತಿಗೆ ಆರ್ಸಿಬಿ ಭಾಜನವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ (23.7 ಮಿಲಿಯನ್) ಮತ್ತು ಮುಂಬೈ ಇಂಡಿಯನ್ಸ್ (20 ಮಿಲಿಯನ್) ತಂಡಗಳನ್ನು ಬಹುದೂರ ಹಿಂದಿಕ್ಕಿರುವ ಆರ್ಸಿಬಿ, ಡಿಜಿಟಲ್ ಜಗತ್ತಿನಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಕಪ್ ಗೆಲ್ಲಲಿ, ಬಿಡಲಿ ನಮ್ಮ ಬೆಂಬಲ ಯಾವತ್ತಿದ್ದರೂ ಆರ್ಸಿಬಿಗೆ ಎನ್ನುವ ಕೋಟ್ಯಂತರ ಅಭಿಮಾನಿಗಳ ಅಚಲ ನಿಷ್ಠೆಗೆ ಈ ಸಾಧನೆಯೇ ಸಾಕ್ಷಿ.







