
ಬೆಂಗಳೂರು:ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ವಿ. ಡಿ. ಸತೀಶನ್ ಅವರಿಗೆ ಕರ್ನಾಟಕದ ಹಿರಿಯ ನಾಯಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಕರ್ನಾಟಕ ಸರಕಾರದ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ಶುಭ ಹಾರೈಸಿದ್ದಾರೆ. ಜನಪ್ರಿಯತೆ ಮತ್ತು ಜನರ ಅಪಾರ ಪ್ರೀತಿಯಿಂದ ಸತೀಶನ್ ಅವರು ಈ ಉನ್ನತ ಸ್ಥಾನಕ್ಕೇರಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
ಮೂರು ದಶಕಗಳ ಅವಿನಾಭಾವ ಸಂಬಂಧ
ಈ ಸಂದರ್ಭದಲ್ಲಿ ಟಿ. ಎಂ. ಶಾಹಿದ್ ಅವರು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. 1995ರಲ್ಲಿ ಸಲೀಂ ಅಹ್ಮದ್ ಎನ್ ಎಸ್ ಯು ಐ ಅಧ್ಯಕ್ಷರಾಗಿದ್ದಾಗ ವಿ. ಡಿ. ಸತೀಶನ್ ಅವರು ಎನ್.ಎಸ್.ಯು.ಐ (NSUI) ರಾಷ್ಟ್ರೀಯ ಕಾರ್ಯದರ್ಶಿಯಾಗಿ ದುಡಿಯುವ ಸಂದರ್ಭದಲ್ಲಿ, ಟಿ. ಎಂ. ಶಾಹಿದ್ ಅವರು ಕರ್ನಾಟಕ ರಾಜ್ಯ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಂದಿನಿಂದ ಆರಂಭವಾದ ಇವರ ಸ್ನೇಹ ಇಂದು ಮೂರು ದಶಕಗಳನ್ನು ಪೂರೈಸಿದೆ. ಕೇವಲ ರಾಜಕೀಯ ಸಂಬಂಧ ಮಾತ್ರವಲ್ಲದೆ, ನಮ್ಮ ನಡುವೆ ಕಳೆದ 30 ವರ್ಷಗಳಿಂದ ಅವರ ಕುಟುಂಬದ ಜೊತೆ ಆತ್ಮೀಯ ಬಾಂಧವ್ಯ ಇದೆ ಶಾಹೀದ್ ತಿಳಿಸಿದ್ದಾರೆ.
ಜನಪ್ರಿಯ ನಾಯಕನಿಗೆ ಸಂದ ಜಯ
”ಸತೀಶನ್ ಅವರ ಹೋರಾಟದ ಮನೋಭಾವ ,ಜಾತ್ಯತೀತ ಮನೋಭಾವ ,ನೇರ ನಡೆ ನುಡಿ ಮತ್ತು ಜನಸಾಮಾನ್ಯರ ಜೊತೆಗಿನ ಒಡನಾಟವೇ ಅವರನ್ನು ಇಂದು ಈ ಮಟ್ಟಕ್ಕೆ ತಂದಿದೆ. ಅವರ ಆಡಳಿತದಲ್ಲಿ ಕೇರಳ ರಾಜ್ಯವು ಮತ್ತಷ್ಟು ಅಭಿವೃದ್ಧಿ ಹೊಂದಲಿ,” ಎಂದು ಟಿ. ಎಂ. ಶಾಹೀದ್ ತೆಕ್ಕಿಲ್ ಅವರು ಶುಭ ಹಾರೈಸಿದ್ದಾರೆ.






