2026ರ ಫಿಫಾ ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಆಟದ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಕೇಪ್ ವರ್ಡೆ ತಂಡದ 40 ವರ್ಷದ ಗೋಲ್‌ಕೀಪರ್ ವೊಜಿನ್ಹಾ, ಇನ್‌ಸ್ಟಾಗ್ರಾಮ್‌ನಲ್ಲಿ ವಿಶ್ವದ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಗೋಲ್‌ಕೀಪರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

​ಟೂರ್ನಿ ಆರಂಭಕ್ಕೂ ಮುನ್ನ ಕೇವಲ 46,000 ಫಾಲೋವರ್ಸ್ ಹೊಂದಿದ್ದ ವೊಜಿನ್ಹಾ, ಸ್ಪೇನ್, ಉರುಗ್ವೆ ಮತ್ತು ಅರ್ಜೆಂಟೀನಾ ವಿರುದ್ಧದ ಪಂದ್ಯಗಳಲ್ಲಿ ತೋರಿದ ಅಸಾಮಾನ್ಯ ಪ್ರದರ್ಶನದಿಂದಾಗಿ ಕೇವಲ ಮೂರೇ ವಾರಗಳಲ್ಲಿ 20 ಮಿಲಿಯನ್‌ಗಿಂತಲೂ (2 ಕೋಟಿ) ಹೆಚ್ಚು ಹೊಸ ಫಾಲೋವರ್ಸ್ ಅನ್ನು ಗಳಿಸಿದ್ದಾರೆ.

​ಸ್ಪೇನ್ ವಿರುದ್ಧದ ಪಂದ್ಯದಲ್ಲಿ 7 ಅದ್ಭುತ ಸೇವ್‌ಗಳನ್ನು ಮಾಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅವರು, ಇಕರ್ ಕಸಿಯಸ್, ಕೈಲರ್ ನವಾಸ್ ಮತ್ತು ಥಿಬಾಟ್ ಕೋರ್ಟೊಯಿಸ್ ಅವರಂತಹ ದಿಗ್ಗಜ ಗೋಲ್‌ಕೀಪರ್‌ಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಕೇವಲ 5 ಲಕ್ಷ ಜನಸಂಖ್ಯೆ ಇರುವ ಕೇಪ್ ವರ್ಡೆ ದೇಶದ ಈ ಆಟಗಾರನಿಗೆ, ಇದೀಗ ಜಗತ್ತಿನಾದ್ಯಂತ ಅಭಿಮಾನಿಗಳ ದಂಡೇ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *