
ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಸುರೇಶ್ ವಾಗ್ಲೆ ವಿಶ್ವ ಪರಿಸರ ದಿನಾಚರಣೆ ಮಹತ್ವದ ಕುರಿತು ಮಾಹಿತಿ ನೀಡಿ, ಗಿಡ ನೆಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮ ಆಧಿಕಾರಿ ಲಿಂಗಪ್ಪ ಎಂ. ಉಪನ್ಯಾಸಕರಾದ ಮೋಹನಚಂದ್ರ, ಪದ್ಮಕುಮಾರ್, ಚಂದ್ರಶೇಖರ್ , ಅಶ್ವಿನಿ.ಎಂ ಮತ್ತು ಶಾರೀಖ ತಸ್ಲಿಮಾ ಹಾಗೂ ಕಛೇರಿ ಸಹಾಯಕ ಚಿದಾನಂದ.ಕೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
🛒 Recommended for You:




