ಸುಳ್ಯ: ತಾಲೂಕಿನ ಅಜ್ಜಾವರ ಮೇನಾಲದಲ್ಲಿ ನಿನ್ನೆ ರಾತ್ರಿ ಸಂಪನ್ನಗೊಂಡ ಉರೂಸ್ ಕಾರ್ಯಕ್ರಮದ ಬಳಿಕ, ಇಂದು ಬೆಳಗ್ಗೆ ನಡೆದ ಹರಾಜು (ಏಲಂ) ಪ್ರಕ್ರಿಯೆಯಲ್ಲಿ ಹಲಸಿನ ಹಣ್ಣೊಂದು ಬರೋಬ್ಬರಿ 10,000 ರೂಪಾಯಿಗೆ ಬಿಕರಿಯಾಗಿದೆ.

ಮೇನಾಲ ಉರೂಸ್ ಕಾರ್ಯಕ್ರಮವು ನಿನ್ನೆ ರಾತ್ರಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರ ಅಂಗವಾಗಿ  ಹಣ್ಣು-ಹಂಪಲು ಹಾಗೂ ವಿವಿಧ ವಸ್ತುಗಳ ಹರಾಜು ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿತ್ತು.

ಹೀಗೆ ಸಾಮಾನ್ಯ ಹಲಸಿನ ಹಣ್ಣೊಂದನ್ನು ಹರಾಜಿಗೆ ಇಟ್ಟಾಗ, ನೆರೆದಿದ್ದವರಲ್ಲಿ ಬಿಡ್ಡಿಂಗ್ (Bidding) ಪೈಪೋಟಿ ಏರ್ಪಟ್ಟಿದೆ. ಧಾರ್ಮಿಕ ಕಾರ್ಯದ ಮೇಲಿನ ಭಕ್ತಿ ಹಾಗೂ ಪುಣ್ಯದ ಕೆಲಸವೆಂದು ಭಾವಿಸಿ ಉತ್ಸಾಹದಿಂದ ಬಿಡ್ಡಿಂಗ್ ಮಾಡಿದ ಪರಿಣಾಮ, ಅಂತಿಮವಾಗಿ ಈ ಹಲಸಿನ ಹಣ್ಣು 10 ಸಾವಿರ ರೂಪಾಯಿಗೆ ಸಾಬಿತ್ ಎಂ.ಆರ್ ಎಂಬುವವರಿಗೆ ಸೋಲ್ಡ್ ಔಟ್ (Sold Out) ಆಗುವ ಮೂಲಕ ನೆರೆದಿದ್ದ ಎಲ್ಲರ ಅಚ್ಚರಿಗೆ ಕಾರಣವಾಯಿತು.

Leave a Reply

Your email address will not be published. Required fields are marked *