
ಸುಳ್ಯದ ಒಡಬಾಯಿಯಲ್ಲಿ ಯುನೈಟೆಡ್ ಟೊಯೋಟಾದ ನೂತನ ಗ್ರಾಮೀಣ ಶೋರೂಂ ಎ.25 ರಂದು ಶುಭಾರಂಭಗೊಂಡಿತು.
ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಎಂ.ಸುಂದರ್ ರಾವ್, ಯುನೈಟೆಡಡ್ ಟೊಯೋಟಾ ಮಾಲಕರಾದ ರಾಮ್ ಗೋಪಾಲ್ ರಾವ್, ಗ್ರಾಹಕರಾದ ಶಾಫಿ ಬೊಳುಬೈಲು, ನಿವೃತ್ತ ರೇಂಜರ್ ರಾಧಾಕೃಷ್ಣ ಕುರುಂಜಿಗುಡ್ಡೆ, ಹಾಜಿ ಇಬ್ರಾಹಿಂ ಖತ್ತಾರ್, ಬ್ರಾಂಚ್ ಮೇನೆಜರ್ ಸಾಬು ಜಾನ್, ಸೇಲ್ಸ್ ಮೇನೇಜರ್ ನವನೀತ್, ಗ್ರಾಹಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮೀಣ ಭಾಗದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಸುಳ್ಯದಲ್ಲಿ ಶೋರೂಂ ತೆರೆಯಲಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
🛒 Recommended for You:




