ಸುಳ್ಯದ ಪ್ರತಿಷ್ಠಿತ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಆಂಗ್ಲ ಭಾಷಾ ವಿಭಾಗದ ಪ್ರಾಧ್ಯಾಪಕರಾಗಿ, 1979ರ ಜೂ. 30ರಿಂದ 1980ರ ಜು.11ರ ತನಕ ಸೇವೆ ಸಲ್ಲಿಸಿದ್ದ ಪ್ರೊ. ಪ್ರಮೋದ ಮುತಾಲಿಕ್ ಡಿ.2ರಂದು ನಿಧನ ಹೊಂದಿದ್ದು, ಇವರಿಗೆ ಸಂಸ್ಥೆಯ ವತಿಯಿಂದ ನುಡಿನಮನ ಸಲ್ಲಿಸಲಾಯಿತು.




ಸಂಸ್ಥೆಯ ಪ್ರಾಚಾರ್ಯ ಡಾ. ರುದ್ರಕುಮಾರ್ ಎಂ.ಎ. ಅವರು ಪ್ರೊ. ಪ್ರಮೋದ ಮುತಾಲಿಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಸಂಜೀವ ಕುದ್ಪಾಜೆ ಅವರು ಪ್ರಮೋದ್ ಮುತಾಲಿಕ್ ಅವರ ಬಗ್ಗೆ ಮಾತನಾಡಿದರು. ಉಪನ್ಯಾಸಕ ವೃಂದದವರು ಮೌನ ಪ್ರಾರ್ಥನೆ ಸಲ್ಲಿಸಿದರು.
🛒 Recommended for You:




