ಕಡಬ, ದಕ್ಷಿಣ ಕನ್ನಡ: ಕಡಬ ತಾಲೂಕಿನ ಮರ್ಧಾಳ ಗ್ರಾಮದ ಇಬ್ಬರು ಸಹೋದರರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ನೂತನ ಮೊಬೈಲ್ ಆ್ಯಪ್ ರೂಪಿಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

V for IAS Notes ಎಂಬ ಈ ಆ್ಯಪ್ ಅನ್ನು ಮೋಹಮ್ಮದ್ ಮುಸ್ತಫಾ ಮರ್ಧಾಳ (Founder) ಹಾಗೂ ಅಬ್ದುಲ್ ರಜಾಕ್ ಮರ್ಧಾಳ (Co-Founder) ಅಭಿವೃದ್ಧಿಪಡಿಸಿದ್ದಾರೆ. UPSC, IAS, IPS ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುವ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವ ಉದ್ದೇಶದಿಂದ ಈ ಆ್ಯಪ್ ನಿರ್ಮಿಸಲಾಗಿದೆ.

ಸ್ಥಳೀಯ ಸಹೋದರರ ಸಾಧನೆ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಅಧ್ಯಯನ ಸಾಮಗ್ರಿಗಳು ತಲುಪಬೇಕು ಎಂಬ ಉದ್ದೇಶದಿಂದ ಮರ್ಧಾಳದ MD ಮುಸ್ತಫಾ ಮರ್ಧಾಳ ಕಳೆದ 9 ವರ್ಷಗಳ ಸಂಶೋಧನೆ ಬಳಿಕ ಈ ಆ್ಯಪ್ ರೂಪಿಸಿದ್ದಾರೆ. ಸ್ಥಳೀಯ ಪ್ರತಿಭೆಗಳು ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿರುವುದು ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಆ್ಯಪ್ ತಯಾರಿಸಿದ 3 ತಿಂಗಳಲ್ಲೇ 10,000 downloads ಹಾಗೂ 5,000 active users ಸಂಖ್ಯೆಯನ್ನು ಹೊಂದಿರುವುದು ವಿಶೇಷವಾಗಿದೆ.

ಆ್ಯಪ್‌ನ ವಿಶೇಷತೆಗಳು

  1. ಮೈಂಡ್ ಮ್ಯಾಪ್‌ಗಳು
    ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ದೃಶ್ಯ ರೂಪದಲ್ಲಿ ನೀಡಲಾಗಿದೆ.
  2. 600+ ರಿಸರ್ಚ್ ಟೇಬಲ್‌ಗಳು
    ಯೋಜನೆಗಳು, ಅಂಕಿಅಂಶಗಳು, ದಿನಾಂಕಗಳು ಮತ್ತು ಹೋಲಿಕೆ ಮಾಹಿತಿಗಳು ಟೇಬಲ್ ರೂಪದಲ್ಲಿ ಲಭ್ಯ.
  3. ವಿಡಿಯೋ ವಿವರಣೆಗಳು
    ಕಷ್ಟವಾದ ವಿಷಯಗಳನ್ನು ಸರಳವಾಗಿ ತಿಳಿಸುವ ವಿಡಿಯೋ ಪಾಠಗಳು.
  4. ಕರೆಂಟ್ ಅಫೇರ್ಸ್ ಲಿಂಕ್
    ಪ್ರತಿದಿನದ ಸುದ್ದಿಗಳನ್ನು ಮೂಲ ಪಠ್ಯ ವಿಷಯಗಳೊಂದಿಗೆ ಜೋಡಿಸಲಾಗಿದೆ.
  5. AI Read Aloud
    ಪಾಠಗಳನ್ನು ಕೇಳುತ್ತಾ ಕಲಿಯುವ ವ್ಯವಸ್ಥೆ.
  6. ರಸಪ್ರಶ್ನೆ ಮತ್ತು ರಾಷ್ಟ್ರೀಯ ರ್ಯಾಂಕ್
    ಪ್ರಶ್ನೋತ್ತರಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಮಟ್ಟವನ್ನು ಪರೀಕ್ಷಿಸಬಹುದು.

ಸ್ಥಾಪಕರ ಮಾತು

ಮೋಹಮ್ಮದ್ ಮುಸ್ತಫಾ ಮರ್ಧಾಳ (Founder) ಹೇಳಿದರು:

“UPSC / IAS / IPS ತಯಾರಿ ಮಾಡುವ ಪ್ರತಿಯೊಬ್ಬರೂ face ಮಾಡುವ biggest challenge ಅಂದರೆ ಎಲ್ಲ ವಿಷಯಗಳು ಒಂದೇ ಜಾಗದಲ್ಲಿ ಸಿಗುವುದಿಲ್ಲ. So ಆ ಒಂದು ದೃಷ್ಟಿಯಿಂದ ಎಲ್ಲ ವಿಷಯಗಳು ಒಂದೇ ಜಾಗದಲ್ಲಿ top to bottom clear vision ಆಗಿ ಇಲ್ಲಿ ನಿಮಗೆ ಪಡೆಯಬಹುದು.”

ಅಬ್ದುಲ್ ರಜಾಕ್ ಮರ್ಧಾಳ (Co-Founder) ಹೇಳಿದರು:

“ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತಿದ್ದರೂ ವಿದ್ಯಾರ್ಥಿಗಳು ಸುಲಭವಾಗಿ ಓದಿ ತಯಾರಿ ನಡೆಸಲು ಈ ಆ್ಯಪ್ ಸಹಾಯಕವಾಗಬೇಕು ಎಂಬುದು ನಮ್ಮ ಉದ್ದೇಶ.”

ಮುಂದಿನ ಯೋಜನೆ

ಪ್ರಸ್ತುತ Android version ಮತ್ತು iOS version ಲಭ್ಯವಿದೆ.

ನೋಟ

ಕಡಬ ಭಾಗದ ಸಹೋದರರು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯತ್ನ ಕೈಗೊಂಡಿರುವುದು ಸ್ಥಳೀಯರಿಗೆ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು Play Store ಹಾಗೂ Appsotore ನಲ್ಲಿ V for IAS Notes ಎಂದು ಹುಡುಕಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *