ಸುಳ್ಯ: ‘ಫುಟ್ಬಾಲ್ ಪೆವಿಲಿಯನ್’ ಡೇ-ನೈಟ್ ಚಾಂಪಿಯನ್ಸ್ ಲೀಗ್ ಸೀಸನ್-4 ಆಟಗಾರರ ಹರಾಜು ಪ್ರಕ್ರಿಯೆ ಯಶಸ್ವಿ

News Sports

ಸುಳ್ಯದ ಫುಟ್ಬಾಲ್ ಪೆವಿಲಿಯನ್ ವಾಟ್ಸಾಪ್ ಗ್ರೂಪ್ ವತಿಯಿಂದ ಆಯೋಜಿಸಲಾದ ಡೇ-ನೈಟ್ ಚಾಂಪಿಯನ್ಸ್ ಲೀಗ್ ಸೀಸನ್-4 (Day-Night Champions League Season-4) ಫುಟ್ಬಾಲ್ ಪಂದ್ಯಾವಳಿಯ ಆಟಗಾರರ ಹರಾಜು (Auction) ಪ್ರಕ್ರಿಯೆಯು ನವೆಂಬರ್ 25, 2026ರಂದು ಸಂಜೆ 7:00 ಗಂಟೆಗೆ ಅರಂಬೂರು ಟರ್ಫ್ ನಲ್ಲಿ ನಡೆಯಿತು.


ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಆರು ತಂಡಗಳ ಮಾಲಕರು ಭಾಗವಹಿಸಿ ತಮ್ಮ ನೆಚ್ಚಿನ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪೈಪೋಟಿ ನಡೆಸಿದವು. ಲಿಹಾ ಏಫ್.ಸಿ ಜಟ್ಟಿಪಳ್ಳ, ಟೀಮ್ ಮಾಫಿಯಾ ಎಫ್.ಸಿ, ಬೇಸ್ ಎಫ್.ಸಿ, ಔರಾ ಫುಟ್ಬಾಲ್ ಕ್ಲಬ್, F3 ಕ್ಲಬ್ ಸುಳ್ಯ, ಬಂಟ್ರಾಲಿಯನ್ ಎಫ್‌ಸಿ, ನಡುವೆ ಅತ್ಯಂತ ಪೈಪೋಟಿ ಹರಾಜು ನಡೆಯಿತು.
ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿರುವ ಈ ಫುಟ್ಬಾಲ್ ಟೂರ್ನಿಯ ಸೀಸನ್-4 ಗಾಗಿ ತಂಡಗಳು ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಈ ಆಟಗಾರರಲ್ಲಿ ಅಪ್ಪಾದು ಬರೋಬ್ಬರಿ ₹5100 ಕ್ಕೆ ಔರ ಎಫ್ ಸಿ ಹಾಗೂ ಕರ್ರಾರ್ ₹5000ಕ್ಕೆ ಬಂಟ್ರಾಲಿಯನ್ ಎಫ್ ಸಿ ತಂಡದ ಪಾಲಾದರು. ಮುಂಬರುವ ಪಂದ್ಯಗಳ ಬಗ್ಗೆ ಫುಟ್ಬಾಲ್ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿವೆ. ಹರಾಜು ಪ್ರಕ್ರಿಯೆಯನ್ನು ನಿಝಾರ್ ಶೈನ್ ವಹಿಸಿಕೊಂಡರು. ಈ ಸಂಧರ್ಭದಲ್ಲಿ ಆಯೋಕರಾದ ಮುನಾಫರ್, ಶಾಝಿಲ್, ಶರೀಫ್ ಕಂಠಿ, ಹಾರಿಸ್ ಬಾರ್ಪಣೆ, ಹನೀಫ್ ಆಲ್ಫಾ, ಸಿರಾಜ್ ಮೈಲ್ಕಳ್, ಶರೀಫ್ ಜಟ್ಟಿಪ್ಪಳ್ಳ, ಸಾಲಿ ಕಟ್ಡೆಕ್ಕಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *