ದ ಕ ಜಿ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅರ್. ಎಂ ಎಸ್. ಎ ಪ್ರೌಡ ಶಾಲೆ ಕಲ್ಲುಗುಂಡಿ ಇದರ ಶಾಲಾ ಪ್ರಾರಂಭೋತ್ಸವ ಕಾರ್ಯ ಕ್ರಮ ಕಲ್ಲುಗುಂಡಿ ಶಾಲಾ ವಠಾರದಲ್ಲಿ,ಡೋಲು ಮೆರವಣಿಗೆ ಮೂಲಕ ಮಕ್ಕಳನ್ನು ಪೋಷಕರನ್ನು ಹಾಗೂ ಅತಿಥಿಗಳನ್ನು ಬರಮಾಡಿಕೊಳ್ಳುವುದರ ಮೂಲಕ ಬಹಳ ಅಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ವಹಿಸಿ ಸರ್ವ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ ಮಾಡಿದರು.ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ದೀಪ ಬೆಳಗಿಸಿ ಉದ್ಘಾಟಿಸಿ ಕಳೆದ ಎಸ್. ಎಸ್. ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಶುಭ ಕೋರಿದರು
ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೂಗುಚ್ಚ ಹಾಗೂ ಪೆನ್ ನೀಡಿ ಸ್ವಾಗತಿಸಿದ ಮಾಜಿ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ ಮಾತನಾಡಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟೋಟ ಸ್ಪರ್ಧೆಗಳನ್ನು ಕಲಿತು. ಸ್ವಚ್ಚತೆಯ ಕಡೆಗೆ ಗಮನ ಹರಿಸಿ. ಕೋರೋಣ ದಂತಹ ರೋಗಗಳು ಬಾರದಂತೆ ಜಾಗೃತೆ ವಹಿಸಿ.ಅಲ್ಲದೆ ಮಳೆಗಾಲ ಸಂದರ್ಬದಲ್ಲಿ ವಿದ್ಯಾರ್ಥಿಗಳು ನದಿ ತೀರದಲ್ಲಿ ಮರಗಳ ಬಳಿ ಜಾಗೃತೆ ವಹಿಸಿ ಎಂದರು. ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಮಹಮದ್ ಹನೀಫ್ ಎಸ್. ಎ ಮಾತನಾಡಿ ವಿದ್ಯಾರ್ಥಿಗಳು,ಪೋಷಕರು ಹಾಗೂ ಅಧ್ಯಾಪಕರು ಉತ್ತಮ ಫಲಿತಾಂಶ ತರಲು ಪ್ರಯತ್ನಿಸಿ ಅಲ್ಲದೆ ವಿದ್ಯಾರ್ಥಿಗಳು ಶಿಸ್ತು ಹಾಗೂ ಸನ್ನಡತೆಯನ್ನು ಮೈಗೂಡಿಸಿಕೊಳ್ಳಿ ಎಂದರು.
ಪ್ರೌಡ ಶಾಲೆ ಮುಖ್ಯ ಗುರುಗಳಾದ ಶ್ರೀಮತಿ ಜಯಶ್ರೀ ಸ್ವಾಗತಿಸಿ.ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಚಂದ್ರಾವತಿ ವಂದಿಸಿದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ವರ್ತಕರಾದ ಯು. ಬಿ ಚಕ್ರಪಾನಿ ಯವರ ವತಿಯಿಂದ ಎಲ್ಲರಿಗೂ ಸಿಹಿ ಪಾಯಸ ವಿತರಿಸಲಾಯಿತು.

Leave a Reply

Your email address will not be published. Required fields are marked *