ಇಂದು ಬಾಯಾರ್ ತಂಙಳ್ ಮೂಡಡ್ಕಕ್ಕೆ

ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ಹಲವಾರು ಪವಾಡಗಳಿಂದ ಪ್ರಸಿದ್ದಿ ಪಡೆದ ಮೂಡಡ್ಕ ಮಖಾಮ್ ಉರೂಸ್ ಕಾರ್ಯಕ್ರಮಕ್ಕೆ ಇಂದು 7/1/2026 ಬುಧವಾರ ದಂದು ಸಂಭ್ರಮದ ಚಾಲನೆ ದೊರಕಲಿದೆ.
🛒 Recommended for You:
ಇವತ್ತಿನಿಂದ ಜನವರಿ 11 ರ ವರೆಗೆ ಐದು ದಿನಗಳಲ್ಲಿ ನಡೆಯುವ ಬೃಹತ್ ಉರೂಸ್ ಕಾರ್ಯಕ್ರಮದಲ್ಲಿ ವಿವಿಧ ಗಣ್ಯಾತಿ ಗಣ್ಯ ಉಲಮಾಗಳು ಬಾಗವಹಿಸಲಿದ್ದಾರೆ.
ಉದ್ಘಾಟನಾ ದಿನವಾದ ಇಂದು ಬುಧವಾರ ಅಸಯ್ಯದ್ ಬಾಯರ್ ತಂಙಳ್ ದುಆ ಆಶೀರ್ವಚನ ಮತ್ತು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಮೂಡಡ್ಕ ವಿದ್ಯಾಸಂಸ್ಥೆಯ ಅಧ್ಯಕ್ಷ ಉಜಿರೆ ಇಸ್ಮಾಯಿಲ್ ತಂಙಳ್ ನೇತೃತ್ವ ನೀಡಲಿದ್ದಾರೆ.
ಸಂಸ್ಥೆಯ ಜನರಲ್ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯಾತಿ ಗಣ್ಯರು ಉಲಮಾಗಳು ಉಮರಾ ನಾಯಕರು ಬಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಗೆ ತಿಳಿಸಿದ್ದಾರೆ.




