ಸ್ಥಳೀಯ ವರದಿ:

ಫ್ರೆಂಡ್ಸ್ ಎಮಿರೇಟ್ಸ್ ಓಲ್ಡ್ ಗೇಟ್ ವತಿಯಿಂದ ಆಯೋಜಿಸಲಾಗಿದ್ದ ಬಹುನಿರೀಕ್ಷಿತ ‘ಲೆಜೆಂಡ್ ಟ್ರೋಫಿ-2026’ ಕ್ರಿಕೆಟ್ ಪಂದ್ಯಾವಳಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪಂದ್ಯಾ ಕೂಟದ ಚಾಂಪಿಯನ್ ಪಟ್ಟವನ್ನು ಎಂ.ಆರ್ ಲೆಜೆಂಡ್ ಪಡೆದುಕೊಂಡರೆ, ರನ್ನರ್ ಅಪ್ ಪ್ರಶಸ್ತಿಯನ್ನು ಪ್ರಗತಿ ಲೆಜೆಂಡ್ ಪಡೆದುಕೊಂಡಿತು. ಕ್ರೀಡಾಂಗಣದಲ್ಲಿ ನೆರೆದಿದ್ದ ನೂರಾರು ಕ್ರೀಡಾಭಿಮಾನಿಗಳ ಹರ್ಷೋದ್ಗಾರದ ನಡುವೆ ಆಟಗಾರರು ತಮ್ಮ ಅದ್ಭುತ ಪ್ರದರ್ಶನವನ್ನು ನೀಡಿದರು. ಇನ್ನು ಚುನಾವಣಾ ಆಯೋಗದಿಂದ ರಾಜ್ಯ ಬೆಸ್ಟ್ ಎಲೆಕ್ಟೋರಲ್ ಪ್ರಾಕ್ಟಿಸ್ ಅವಾರ್ಡ್ ಪಡೆದಿರುವ ಸುಳ್ಯ ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ಮಂಜುಳಾ ಎಂ,ಕೆ ಎ ಎಸ್,ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕು ಘಟಕದ ಸಭಾಪತಿ ಹಾಗೂ 160ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಪಿ ಬಿ ಸುಧಾಕರ್ ರೈ,ಸುಳ್ಯ ತಾಲೂಕು ಶಿಕ್ಷಣ ಸಪ್ಪನ್ಮೂಲ ಕೇಂದ್ರದ ಅಧ್ಯಕ್ಷರು,ಹಾಗೂ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪತ್ರಕರ್ತ ಹಸೈನಾರ್ ಜಯನಗರ ಇವರುಗಳಿಗೆ ಫ್ರೆಂಡ್ಸ್ ಎಮಿರೇಟ್ಸ್ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪಂದ್ಯಾವಳಿಯ ಉದ್ದಕ್ಕೂ ಅತ್ಯುತ್ತಮ ಆಟ ಪ್ರದರ್ಶಿಸಿದ ವಿವಿಧ ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಬದ್ರು ಡಿ.ಹೆಚ್ ಅವರು ಮುಡಿಗೇರಿಸಿಕೊಂಡರೆ, ಫೈನಲ್ ಪಂದ್ಯದ ರೋಚಕ ಕ್ಷಣಗಳಲ್ಲಿ ಮಿಂಚಿದ ಮಣಿ ಎಂ.ಜಿ. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಗೌರವಕ್ಕೆ ಪಾತ್ರರಾದ ಸಾಧಕರು:
- ಸರಣಿ ಶ್ರೇಷ್ಠ ಆಟಗಾರ: ಬದ್ರು ಡಿ.ಹೆಚ್
- ಫೈನಲ್ ಪಂದ್ಯದ ಪಂದ್ಯಶ್ರೇಷ್ಠ: ಮಣಿ ಎಂ.ಜಿ.
- ಅತ್ಯುತ್ತಮ ಬ್ಯಾಟ್ಸ್‌ಮನ್: ಸುರೇಂದ್ರ ಕಾಮತ್
- ಅತ್ಯುತ್ತಮ ಬೌಲರ್: ಅಬ್ದುಲ್ ರಹಮಾನ್ ಜಯನಗರ
- ಅತ್ಯುತ್ತಮ ಫೀಲ್ಡರ್: ಯೂಸುಫ್ ಮಾಸ್ಟರ್ ಅಡ್ಕ
- ಅತ್ಯುತ್ತಮ ಕೀಪರ್: ಆಸಿಫ್ ಎಂಜಿನಿಯರ್ ಬೆಂಗಳೂರು
- ಉದಯೋನ್ಮುಖ ಆಟಗಾರ: ಬಸೀರ್ ಕೆ.ಎಂ. ಆಯ್ಕೆಯಾದರು
ಈ ಟೂರ್ನಿಯಲ್ಲಿ ಪ್ರಗತಿ ಲೆಜೆಂಡ್, ಗಲ್ಫ್ ಬಾಯ್ಸ್ ಲೆಜೆಂಡ್, ಎಂ.ಆರ್ ಲೆಜೆಂಡ್ ಮತ್ತು ಪೋಸೋಟ್ ಲೆಜೆಂಡ್ ಎಂಬ ನಾಲ್ಕು ಪ್ರಮುಖ ತಂಡಗಳು ಭಾಗವಹಿಸಿ ಕ್ರೀಡಾ ಮನೋಭಾವವನ್ನು ಮೆರೆದವು. ಸಂಘಟಕರು ಈ ಕ್ರೀಡಾಕೂಟವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ್ದು, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಕ್ರೀಡಾ ಪ್ರೇಮಿಗಳು ಶ್ಲಾಘಿಸಿದ್ದಾರೆ.
