ಗೂನಡ್ಕ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ, ಇದರ ಅಭಿವೃದ್ಧಿ ಮತ್ತು ಸರ್ವತೋಮುಖ ಬೆಳವಣಿಗೆ ಹಾಗೂ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಉದ್ದೇಶ ಮತ್ತು ದೂರದೃಷ್ಠಿಯಲ್ಲಿ ಇಂದು ಶಾಲಾ ಸಭಾ ಭವನದಲ್ಲಿ ಸಮಾಲೋಚನ ಸಭೆಯನ್ನು ನಡೆಸಲಾಯಿತು.
ಈ ಸಭೆಯಲ್ಲಿ ಶಾಲಾ ಸಂಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್, ಅಬ್ದುಲ್ಲಾ ಮಾಸ್ವರ್ (ನಿವೃತ್ತ ಮುಖ್ಯ ಶಿಕ್ಷಕರು, ಅರಂತೋಡು.) ದಾಮೋದರ ಮಾಸ್ವರ್ (ನಿವೃತ್ತ ಮುಖ್ಯ ಶಿಕ್ಷಕರು, ಗೂನಡ್ಕ.) ಸುಮತಿ ಶಕ್ತಿವೇಲು (ಮಾಜಿ ಅಧ್ಯಕ್ಷರು ಗ್ರಾ.ಪ ಸಂಪಾಜೆ.) ಎಸ್ ಕೆ ಹನೀಫ್ (ಮಾಜಿ ಉಪಾಧ್ಯಕ್ಷರು, ಗ್ರಾ.ಪ ಸಂಪಾಜೆ) ಜಿ ಕೆ ಹನೀಫ್ (ಮಾಜಿ ಅಧ್ಯಕ್ಷರು, ಗ್ರಾ.ಪ ಸಂಪಾಜೆ.) ತಾಜ್ ಮಹಮ್ಮದ್, ದಿನಕರ ಸಣ್ಣಮನೆ, ಅಶ್ರಫ್ ಗುಂಡಿ, ಖಾದರ್ ಮೊಟ್ಟೆಂಗಾರ್ (ಅಧ್ಯಕ್ಷರು,ಶಿಕ್ಷಕ -ರಕ್ಷಕ ಸಂಘ) ಸಾಧಿಕ್ ಮಾಸ್ವರ್, ಪೋಷಕ ವೃಂದದವರಾದ ಅಬ್ದುಲ್ ಸಲಾಂ, ಇಸಾಕ್ಕುದ್ದೀನ್, ಮುಖ್ಯ ಶಿಕ್ಷಕರಾದ ಸಂಪತ್ ಜೆ ಡಿ, ಶಿಕ್ಷಕ ವೃಂದದವರಾದ ಸಾಧಿಕ ಎ ಕೆ, ಆಯಿಷತ್ ಸಬೀರಾ, ಬುಶ್ರಾ ಕೆ ಆಯಿಷತ್ ಸುನೈನಾ, ಕೈರುನ್ನೀಸ ಎಸ್ ಇ, ಸೋನಿಯಾ ಪಿ, ದಿಲ್ ಶಾನಾ, ಆಯಿಷತ್ ಇಶಾನಾ ಹಾಗೂ ಊರಿನ ಶಿಕ್ಷಣ ಅಭಿಮಾನಿಗಳು ಪಾಲ್ಗೊಂಡಿದ್ದರು.ಶಾಲೆಯನ್ನು ಉಳಿಸಿ ಬೆಳೆಸಬೇಕು ಮತ್ತು ಅಗತ್ಯ ಸೌಲಭ್ಯ ಗಳಿಗೆ ಎಲ್ಲರೂ ಸಹಕರಿಸುವ ಭರವಸೆ ನೀಡಿದರು.

Leave a Reply

Your email address will not be published. Required fields are marked *