
ಸುಳ್ಯ: ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯು ಮಂಗಳವಾರ (ಮಾ. 31ರಂದು) ಕುಮಾರಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಭೆಯಲ್ಲಿ ಸಮಿತಿಯ ಪ್ರಮುಖ ಸದಸ್ಯರಾದ ಶಹೀದ್ ಪಾರೆ, ಚಂದ್ರನ್ ಕುಟ್ಟೇಲ್, ಅಬ್ದುಲ್ ರಝಾಕ್, ಪ್ರಗತಿ ವಿಜಯ, ಜಯರಾಮ, ಸುರೇಶ್ ಕಾಮತ್, ಗಿರೀಶ್ ಪಡ್ಡಂಬೈಲ್, ಸಂಜೀವ ಬಡ್ಡೇಕಲ್ಲು ಹಾಗೂ ರಾಧಾಕೃಷ್ಣ ಪಾರಿವಾರಕಾನ ಅವರು ಭಾಗವಹಿಸಿದ್ದರು.
ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನವೀನ್ ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿ ವರ್ಗದವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





