ನೆಟ್ಟಾರ್: ಬ್ಲಡ್ ಡೋನರ್ಸ್ ಮಂಗಳೂರು (ರಿ.) (BDM) ನ 13ನೇ ವಾರ್ಷಿಕೋತ್ಸವದ ಪ್ರಯುಕ್ತ, ಅಲ್ ಅಮಾನ್ ಕಮಿಟಿ ನೆಟ್ಟಾರ್ ಹಾಗೂ ರಫಾ ಫೌಂಡೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

​ಈ ರಕ್ತದಾನ ಶಿಬಿರವು ಬ್ಲಡ್ ಡೋನರ್ಸ್ ಮಂಗಳೂರು (ರಿ.) ಇದರ ಸಹಕಾರದೊಂದಿಗೆ ಇದೇ ಬರುವ ಏಪ್ರಿಲ್ 26, 2026 ರಂದು ನೆಟ್ಟಾರ್‌ನ ನೂರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಶಿಬಿರ ಜರುಗಲಿದೆ.

​ರಕ್ತದಾನವು ಜೀವ ಉಳಿಸುವ ಮಹತ್ಕಾರ್ಯವಾಗಿದ್ದು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡುವ ಮೂಲಕ ಈ ಶಿಬಿರವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

​ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:

9611817825 / 8105147360 / 9902137255 / 9632870947

Leave a Reply

Your email address will not be published. Required fields are marked *