ಇತ್ತೀಚೆಗೆ ಪ್ರಕಟವಾದ 2026ನೇ ಸಾಲಿನ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಕೆ.ವಿ.ಜಿ. ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಉಮ್ಮುಲ್ ಫಿದಾ ಕೆ.ಇ. ಅವರು ಶೇ. 93.2 ರಷ್ಟು ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

​ಇವರು ಕೆ.ಎಂ. ಅಬ್ದುಲ್ ಕಮಾಲ್ ಮತ್ತು ತಾಹಿರಾ ಜಿ.ಎಂ. ದಂಪತಿಯ ಪುತ್ರಿಯಾಗಿದ್ದಾರೆ.

​ಆಯಿಷತ್ ಉಮ್ಮುಲ್ ಫಿದಾ ಅವರು ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಷಯದಲ್ಲಿ 99 ಅಂಕ, ಗಣಿತದಲ್ಲಿ 94, ಕನ್ನಡ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ 93, ಇಂಗ್ಲಿಷ್‌ನಲ್ಲಿ 87 ಹಾಗೂ ವಿಜ್ಞಾನದಲ್ಲಿ 86 ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಈ ಅಮೋಘ ಸಾಧನೆಗೆ ಪೋಷಕರು, ಶಿಕ್ಷಕವೃಂದ ಹಾಗೂ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದೆ.

Leave a Reply

Your email address will not be published. Required fields are marked *