ಇತ್ತೀಚೆಗೆ ಪ್ರಕಟವಾದ 2026ನೇ ಸಾಲಿನ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ ಕೆ.ವಿ.ಜಿ. ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆಯಿಷತ್ ಉಮ್ಮುಲ್ ಫಿದಾ ಕೆ.ಇ. ಅವರು ಶೇ. 93.2 ರಷ್ಟು ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಇವರು ಕೆ.ಎಂ. ಅಬ್ದುಲ್ ಕಮಾಲ್ ಮತ್ತು ತಾಹಿರಾ ಜಿ.ಎಂ. ದಂಪತಿಯ ಪುತ್ರಿಯಾಗಿದ್ದಾರೆ.
ಆಯಿಷತ್ ಉಮ್ಮುಲ್ ಫಿದಾ ಅವರು ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಷಯದಲ್ಲಿ 99 ಅಂಕ, ಗಣಿತದಲ್ಲಿ 94, ಕನ್ನಡ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ 93, ಇಂಗ್ಲಿಷ್ನಲ್ಲಿ 87 ಹಾಗೂ ವಿಜ್ಞಾನದಲ್ಲಿ 86 ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಈ ಅಮೋಘ ಸಾಧನೆಗೆ ಪೋಷಕರು, ಶಿಕ್ಷಕವೃಂದ ಹಾಗೂ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದೆ.







