ಬೂತನಕಾಡು,ಮೇ.08 :ನೂರುಲ್ ಇಸ್ಲಾಮ್ ಮದ್ರಸ ಬೂತನಕಾಡು ಇಲ್ಲಿನ SKSBV ವಿದ್ಯಾರ್ಥಿ ಒಕ್ಕೂಟದ ಚುಣಾವಣೆಯು ಖತೀಬರಾದ ಉಸ್ಮಾನ್ ತನಾಝ್ ಮಅಬರಿ ಅಲ್ ಫೈಝಿ ಪೆರಾಜೆ ಇವರ ಮೇಲ್ವಿಚಾರಣೆಯಲ್ಲಿ ಅದ್ದೂರಿಯಾಗಿ ಜರುಗಿತು.

ಚುನಾವಣಾ ಕಾವಿನಿಂದ ರಂಗೇರಿದ ಕಣವು ಅಧ್ಯಕ್ಷಗಿರಿಗೆ ಮಹಮ್ಮದ್ ಶಯಾನ್ ಹಾಗೂ ಮಹಮ್ಮದ್ ಅನಸ್ ನಡುವೆ ನಡೆಯಿತು.ಕ್ರಮವಾಗಿ ಕಾರ್ಯದರ್ಶಿ ಸ್ಥಾನಕ್ಕೆ ಮುಹಮ್ಮದ್ ಇಫ್ರಾಝ್ ಹಾಗೂ ಮಹಮ್ಮದ್ ಅಫ್ಹಾಮ್ ನಡುವೆ ಹಾಗೂ ಕೋಶಾಧಿಕಾರಿ ಸ್ಥಾನಕ್ಕೆ ಮಹಮ್ಮದ್ ಅಬೂ ತ್ವಾಹಿರ್ ಮತ್ತು ಯೂಸುಫ್ ಅಹ್ಮದ್ ಅಲಿ ನಡುವೆ ನಡೆಯಿತು. ಫಲಿತಾಂಶವಾಗಿ ಅಧ್ಯಕ್ಷರಾಗಿ ಮಹಮ್ಮದ್ ಶಯಾನ್,ಕಾರ್ಯದರ್ಶಿಯಾಗಿ ಮುಹಮ್ಮದ್ ಇಫ್ರಾಝ್ ಹಾಗೂ ಕೋಶಾಧಿಕಾರಿಯಾಗಿ ಮಹಮ್ಮದ್ ಅಬೂ ತ್ವಾಹಿರ್ ಬಹುಮತದಿಂದ ಆಯ್ಕೆಗೊಂಡರು.

ವಿದ್ಯಾರ್ಥಿ ಚುಣಾವಣೆಯೂ ಮದ್ರಸ ನಿರ್ವಾಹಕ ಮಂಡಳಿ ಹಾಗೂ ಜಮಾತ್ ಸಮಿತಿಯ ಸಹಕಾರದೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಈ ಚುಣಾವಣೆಯು ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ‌ ಮತ್ತು ಚೈತನ್ಯವನ್ನು ಮೂಡಿಸಿದೆ.ಉಸ್ತಾದರಾದ ಮುಹಮ್ಮದ್ ಆಸಿಫ್ ಜಲಾಲಿ ಚುನಾವಣಾ ಕಾರ್ಯ ಚಟುವಟಿಕೆಳಿಗೆ ಸಾಥ್ ನೀಡಿದರು.

Leave a Reply

Your email address will not be published. Required fields are marked *