ಸುಳ್ಯ: ಆಟೋರಿಕ್ಷಾ ಚಾಲಕ ಮಾಲಕರ ಸಂಘ (ರಿ.) ಐವರ್ನಾಡು ಇದರ ಆಶ್ರಯದಲ್ಲಿ ಏಪ್ರಿಲ್ 27, 2026ರಂದು ಸೋಮವಾರ ಐವನಾಡು ಪದವಿಪೂರ್ವ ಕಾಲೇಜು ಮೈದಾನದಲ್ಲಿ ‘ಗ್ರಾಮ ಗ್ರಾಮಗಳ ನಡುವಿನ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ – 2026’ ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ರೋಚಕ ಅಂಡರ್ ಆರ್ಮ್ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಸ್ತ್ರ ಪೈಚಾರ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಪ್ರಥಮ ಬಹುಮಾನವಾದ ₹15,000 ನಗದು ಹಾಗೂ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಅಂತಿಮ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ಟೀಮ್ ಐವರ್ನಾಡು ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ದ್ವಿತೀಯ ಬಹುಮಾನವಾದ ₹12,000 ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.
ವೈಯಕ್ತಿಕ ಪ್ರಶಸ್ತಿ ವಿಜೇತರು:
- ಸರಣಿಶ್ರೇಷ್ಠ (Man of the Series): ಅಶ್ರಫ್ ಪೈಚಾರ್
- ಪಂದ್ಯಪುರುಷ (Man of the Match): ಹರೀಶ
- ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್ (Best Batsman): ತಿರುಮಲೇಶ್ವರ
- ಅತ್ಯುತ್ತಮ ಬೌಲರ್ (Best Bowler): ಅಶ್ರಫ್ ಪೈಚಾರ್, ಪಡೆದುಕೊಂಡರು.
ಪಂದ್ಯಾಟದ ಅಂಗವಾಗಿ ಮಧ್ಯಾಹ್ನ ನೆರೆದಿದ್ದ ಕ್ರೀಡಾಪಟುಗಳಿಗೆ ಹಾಗೂ ವೀಕ್ಷಕರಿಗೆ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಸ್ಥಳೀಯ ಕ್ರೀಡಾಭಿಮಾನಿಗಳು ಹಾಗೂ ಆಟೋರಿಕ್ಷಾ ಸಂಘದ ಸದಸ್ಯರ ಸಮ್ಮುಖದಲ್ಲಿ ಈ ಪಂದ್ಯಾಟವು ಅತ್ಯಂತ ಅದ್ದೂರಿಯಾಗಿ ಮೂಡಿಬಂತು.




