ಸುಳ್ಯ: ಸುಳ್ಯ ಸಮೀಪದ ಮೊಗರ್ಪಣೆ ತಿರುವಿನಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಆಲ್ಟೋ ಕಾರಿನಲ್ಲಿದ್ದ ಮಹಿಳೆಗೆ ಗಾಯಗಳಾಗಿವೆ.

ಹಳೆಗೇಟಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಆಲ್ಟೋ (Alto) ಕಾರಿಗೆ, ಸುಳ್ಯದಿಂದ ಪೆರ್ಲ ಕಡೆಗೆ ತೆರಳುತ್ತಿದ್ದ ಕ್ವಿಡ್ (Kwid) ಕಾರು ಡಿಕ್ಕಿ ಹೊಡೆದಿದೆ.
🛒 Recommended for You:
ಡಿಕ್ಕಿಯಾದ ರಭಸಕ್ಕೆ ಆಲ್ಟೋ ಕಾರಿನ ಏರ್‌ಬ್ಯಾಗ್ (Airbag) ತೆರೆದುಕೊಂಡಿದ್ದು, ಕಾರಿನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡ ಮಹಿಳೆಯನ್ನು ಕೂಡಲೇ ಸುಳ್ಯದ ಕೆವಿಜಿ (KVG) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾರ್ವಜನಿಕರ ಆರೋಪ:
ಕ್ವಿಡ್ ಕಾರಿನ ಚಾಲಕ ಸಂಪೂರ್ಣವಾಗಿ ಮದ್ಯಪಾನ ಮಾಡಿದ್ದ. ಮದ್ಯದ ಅಮಲಿನಲ್ಲಿ ಅತಿವೇಗವಾಗಿ ತಪ್ಪು ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಈ ಅಪಘಾತ ಎಸಗಿದ್ದಾನೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದ್ದಾರೆ.




