ಏಪ್ರಿಲ್ 25ರಂದು ನಡೆದ ಐಪಿಎಲ್ 2026ರ ಡಬಲ್ ಹೆಡರ್ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ್ದು, ಬ್ಯಾಟರ್‌ಗಳ ಅಬ್ಬರಕ್ಕೆ ದಾಖಲೆಗಳು ಧೂಳೀಪಟವಾಗಿವೆ. ಕಣಕ್ಕಿಳಿದ ನಾಲ್ಕೂ ತಂಡಗಳು 220ಕ್ಕೂ ಅಧಿಕ ರನ್ ಬಾರಿಸುವ ಮೂಲಕ ಒಂದೇ ದಿನ ಒಟ್ಟು ಬರೋಬ್ಬರಿ 986 ರನ್ ಕಲೆಹಾಕಿ ಹೊಸ ಇತಿಹಾಸ ನಿರ್ಮಿಸಿವೆ.

ನಾಲ್ಕು ತಂಡಗಳ ಸ್ಕೋರ್ ವಿವರ ಇಲ್ಲಿದೆ:
🛒 Recommended for You:
- ಡೆಲ್ಲಿ ಕ್ಯಾಪಿಟಲ್ಸ್: 264/2
- ಪಂಜಾಬ್ ಕಿಂಗ್ಸ್: 265/4
- ರಾಜಸ್ಥಾನ್ ರಾಯಲ್ಸ್: 228/6
- ಸನ್‌ರೈಸರ್ಸ್ ಹೈದರಾಬಾದ್: 229/5
ಒಟ್ಟು ರನ್: 986 ರನ್
ಒಟ್ಟು ವಿಕೆಟ್: 17 ವಿಕೆಟ್
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ಹಾಗೂ ಪಂಜಾಬ್ ತಂಡಗಳು ಸೇರಿ ಒಟ್ಟು 529 ರನ್ ಗಳಿಸಿದರೆ, ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಹೈದರಾಬಾದ್ ತಂಡಗಳು 457 ರನ್ ಸಿಡಿಸಿವೆ. ಬ್ಯಾಟರ್‌ಗಳ ಅಬ್ಬರಕ್ಕೆ ಸಿಲುಕಿದ ಬೌಲರ್‌ಗಳ ಪಾಲಿಗೆ ಇದೊಂದು ದುಃಸ್ವಪ್ನದ ದಿನವಾಗಿತ್ತು.




