ಸುಳ್ಯ: ನಾವೂರು ನಿವಾಸಿ ಹಾಗೂ ಸುಳ್ಯದ ಗ್ರೀನ್ ವ್ಯೂ ಶಾಲೆಯ ವಿದ್ಯಾರ್ಥಿನಿ ರಿಝಾ T.Z ಅವರು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟು 625 ಅಂಕಗಳಿಗೆ 603 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ.

ವಿಶೇಷವೆಂದರೆ, ಇವರು ಇಂಗ್ಲಿಷ್ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆಗೈದಿದ್ದಾರೆ. ಇವರು ನಾವೂರಿನ ಝಕರಿಯಾ ಟಿ.ಎ. ಮತ್ತು ಜಮೀಲಾ ಎ.ಬಿ. ದಂಪತಿಯ ಪುತ್ರಿಯಾಗಿದ್ದಾರೆ.
🛒 Recommended for You:
ವಿದ್ಯಾರ್ಥಿನಿಯ ಈ ಅತ್ಯುತ್ತಮ ಶೈಕ್ಷಣಿಕ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಊರಿನ ಗಣ್ಯರು ಹರ್ಷ ವ್ಯಕ್ತಪಡಿಸಿ, ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.




