ಇತ್ತೀಚೆಗೆ ಪ್ರಕಟಗೊಂಡ ಎಸೆಸೆಲ್ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಸುಳ್ಯದ ರೋಟರಿ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಮಿಸ್ಬಾ ಅವರು ಒಟ್ಟು 531 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಇವರು ಕೆ. ಅಬ್ದುಲ್ ಖಾದರ್ ಮತ್ತು ಫೌಝಿಯಾ ದಂಪತಿಯ ಪುತ್ರ. ವಿದ್ಯಾರ್ಥಿಯ ಈ ಗಮನಾರ್ಹ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ, ಮುಂದಿನ ಭವಿಷ್ಯಕ್ಕೆ ಶುಭಕೋರಿದ್ದಾರೆ.
🛒 Recommended for You:




