ಸುಳ್ಯ: ಇಲ್ಲಿನ ಪ್ರತಿಷ್ಠಿತ ಸೈಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿನಿ ತಂಝೀಲ ಜಿ. ಹೆಚ್. ಅವರು ಪರೀಕ್ಷೆಯಲ್ಲಿ ಒಟ್ಟು 604 ಅಂಕಗಳನ್ನು ಪಡೆಯುವ ಮೂಲಕ ಶೇಕಡಾ 97 ರಷ್ಟು ಫಲಿತಾಂಶದೊಂದಿಗೆ ಅತ್ಯುನ್ನತ ಸಾಧನೆ ಮಾಡಿದ್ದಾರೆ.

​ಇವರು ಹೈದರ್ ಕುಕ್ಕುಂಬಳ ಹಾಗೂ ತಾಹಿರಾ ಜಿ. ಎಂ. ದಂಪತಿಯ ಪುತ್ರಿಯಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುವ ತಂಝೀಲ ಅವರ ಈ ಅದ್ಭುತ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಊರಿನವರು ಹರ್ಷ ವ್ಯಕ್ತಪಡಿಸಿ, ಶುಭಕೋರಿದ್ದಾರೆ.

Leave a Reply

Your email address will not be published. Required fields are marked *