ತಿರುವನಂತಪುರಂ: ನಿನ್ನೆ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇರಳಂ, ಮುಖ್ಯಮಂತ್ರಿ ಹಾಗೂ ತಮ್ಮ ಆತ್ಮೀಯ ಸ್ನೇಹಿತರಾದ ವಿ.ಡಿ. ಸತೀಶನ್ ಅವರನ್ನು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ತಿರುವನಂತಪುರಂ ಸೆಕ್ರಟ್ರಿಯೇಟ್ ನಲ್ಲಿರು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾಗಿ ಅಭಿನಂದಿಸಿದರು.
ನಿನ್ನೆ ನಡೆದ ಕೇರಳ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರನ್ನು ವಿಶೇಷ ಅತಿಥಿಯಾಗಿ ಭಾಗವಹಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಸಿ ಎಂ ಪಿ ಧುರೀಣ ಅಬ್ದುಲ್ ಹಮೀದ್ ಬಾಪೂಟಿ ,ಟಿ.ಎಂ. ಶಾಜ್ ತೆಕ್ಕಿಲ್, ಟಿ.ಎಂ. ಶೈನ್ ತೆಕ್ಕಿಲ್, ಟಿ.ಎಂ. ಶಯಾನ್ ತೆಕ್ಕಿಲ್ ಹಾಗೂ ಎಂ.ಎ. ಅಫ್ತಾಬ್ ಮುನಂಬತ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *