ಸುಳ್ಯ ಸಂಪಾಜೆ ಗ್ರಾಮದ ಮುಹಿದ್ಧೀನ್ ಜುಮಾ ಮಸೀದಿ ಪೇರಡ್ಕ ಗೂನಡ್ಕ ಇದರ ಅಧೀನದಲ್ಲಿ ಪ್ರಾರಂಭಗೊಂಡ ಅಲ್ ಬಿರ್ರ್ ಪ್ರೀಸ್ಕೂಲ್ ಹಾಗೂ ಪ್ರವಾಸೋಧ್ಯಮ ಇಲಾಖೆಯ ಅನುದಾನದಡಿಯಲ್ಲಿ ನಿರ್ಮಾಣಗೊಂಡ ಯಾತ್ರಿಭವದ ಉದ್ಘಾಟನೆಯು ಜೂ. 9 ರಂದು ಬೆಳಿಗ್ಗೆ 10:00 am ಗಂಟೆಗೆ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕದಲ್ಲಿ ನಡೆಯಲಿದೆ. ಅಲ್ ಬಿರ್ರ್ ಪ್ರೀಸ್ಕೂಲ್ ಮತ್ತು ಯಾತ್ರಿಭವನವನ್ನು ಸಮಸ್ತ ಕೇರಳ ಜಂಇತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಬಹು| ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮುಹಿದ್ಧೀನ್ ಜುಮಾ ಮಸೀದಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ.
ದುವಾವನ್ನು ಸಯ್ಯಿದ್ ಜಲಾಲುದ್ಧೀನ್ ತಂಙಳ್ ಕುನ್ನುಂಗೈ ಹಾಗೂ ಪ್ರಾಸ್ತಾವಿಕ ಮಾತುಗಳನ್ನು ಪೇರಡ್ಕ ಜುಮಾ ಮಸೀದಿ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿವಿಧ ಜಮಾಅತ್ ಗಳ ಖತೀಬರು, ಅಧ್ಯಕ್ಷರುಗಳು, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಮೊಹಿಯುದ್ದೀನ್ ಜುಮ ಮಸ್ಜಿದ್ ಉಪಾಧ್ಯಕ್ಷರಾದ ಟಿ ಬಿ ಹನೀಫ್ , ಅಲ್ ಬಿರ್ ಸ್ಕೂಲ್ ಅಧ್ಯಕ್ಷರಾದ ಪಿ ಕೆ ಉಮ್ಮರ್ ಗೂನಡ್ಕ , ಎಂ ಆರ್ ಡಿ ಎ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ , ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಮುನೀರ್ ದಾರಿಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *